ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯ ಅವರು ಲೋಕಸಭೆಯ ಪ್ರತಿಪಕ್ಷ ಸ್ಥಾನದಿಂದ ಶೀಘ್ರದಲ್ಲೇ ನಿರ್ಗಮಿಸುವ ಸುಳಿವು ಲಭಿಸಿದೆ. ಅವರ ಈ ಸ್ಥಾನವನ್ನು ಲೋಕಸಭಾ ಉಪ ನಾಯಕಿ, ಕರ್ನಾಟಕದ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದ ಸುಷ್ಮಾ ಸ್ವರಾಜ್ ಅವರಿಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಡ್ವಾಣಿಯವರು ಬಿಜೆಪಿ ನಾಯಕ ಅರುಣ್ ಜೇಟ್ಲಿಯವರಿಗೆ ಈ ವಿಷಯ ತಿಳಿಸಿದ್ದು, ಅವರನ್ನು ರಾಜ್ಯಸಭೆಯ ಪ್ರತಿಪಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ತಿಳಿಸಿದ್ದಾರೆ. ಆದರೆ ತಾನು ಯಾವಾಗ ಪ್ರತಿಪಕ್ಷ ನಾಯಕನ ಸ್ಥಾನದಿಂದ ನಿರ್ಗಮಿಸುತ್ತೇನೆಂಬ ವಿಚಾರವನ್ನು ಮಾತ್ರ ತಿಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಸುಷ್ಮಾ ಸ್ವರಾಜ್ ಅವರು ಈಗಾಗಲೇ ಲೋಕಸಭಾ ಪ್ರತಿಪಕ್ಷದ ಉಪ ನಾಯಕಿಯಾಗಿ ಕಾರ್ಯನಿರ್ವಹಿತ್ತಿದ್ದಾರೆ ಆಲ್ಲದೆ, ಎನ್‌ಡಿಎ ಪಕ್ಷದ ಸಂಸದೀಯ ವ್ಯವಹಾರಗಳ ನಿರ್ವಹಣೆ ಬಗ್ಗೆ ಅವರು ಆಸಕ್ತಿ ತೋರುತ್ತಿದ್ದಾರೆ ಎಂದು ಬಿಜೆಪಿ ನಾಯಕ ಅನಂತಕುಮಾರ್ ತಿಳಿಸಿದ್ದಾರೆ.