ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಬಗ್ಗೆ ಪಾಕ್ ಭಯಪಡಬೇಕಿಲ್ಲ: ಪ್ರಧಾನಿ ಸಿಂಗ್ (Pakistan | Prime Minister | terror | India)
Feedback Print Bookmark and Share
 
ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಷ್ಟ್ರದ ನೀತಿ ಎಂಬಂತೆ ಬಳಸುತ್ತಿರುವುದನ್ನು 'ದುರಂತ' ಎಂಬುದಾಗಿ ಹೇಳಿದ ಪ್ರಧಾನಿ ಮನಮೋಹನ್ ಸಿಂಗ್, ಪಾಕಿಸ್ತಾನವು ತನ್ನ ಪ್ರಾಂತ್ಯವನ್ನು ತನ್ನ ನೆರೆದೇಶದ ವಿರುದ್ಧದ ಕಾರ್ಯಾಚರಣೆ ನಡೆಸಲು ಬಳಸದಂತೆ ತಡೆದುದೇ ಆದರೆ, ಭಾರತವು ಆ ದೇಶದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.

ಪ್ರಧಾನಿಯವರು ಅಮೆರಿಕಕ್ಕೆ ತೆರಳವುದಕ್ಕೆ ಪೂರ್ವಾಭಾವಿಯಾಗಿ ವಾಶಿಂಗ್ಟನ್ ಪೋಸ್ಟ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಭಾರತವು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯ ಬಲಿಪಶುವಾಗಿದೆ ಮತ್ತು ಗುಪ್ತಚರ ಇಲಾಖೆಯ ವರದಿಗಳು ಹೇಳುವಂತೆ ಆ ರಾಷ್ಟ್ರದ ಭಯೋತ್ಪಾದಕರು ಕಳೆದ ವರ್ಷ ಮುಂಬೈಯಲ್ಲಿ ನಡೆಸಿರುವಂತಹುದೇ ದಾಳಿಯನ್ನು ಮತ್ತೂ ನಡೆಸಲು ಯೋಜಿಸುತ್ತಿದ್ದಾರೆ ಎಂಬುದಾಗಿ ಹೇಳುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ.

"ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಳೆದ ವರ್ಷ ನಡೆಸಿರುವಂತಹುದೇ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಗಳನ್ನು ತಾನು ದಿನವೂ ಪಡೆಯುತ್ತಿದ್ದೇನೆ" ಎಂಬುದಾಗಿ ಪ್ರಧಾನಿ ಹೇಳಿದ್ದಾರೆ.

ಪ್ರಧಾನಿ ಅವರು ನೀಡಿರುವ ಈ ಸಂದರ್ಶನವು ಪ್ರಧಾನಿಯವರು ಅಮೆರಿಕಕ್ಕೆ ಆಗಮಿಸುವ ಭಾನುವಾರದಂದು ಪತ್ರಿಕೆಯ ಭಾನುವಾರದ ಆವೃತ್ತಿಯಲ್ಲಿ ಪ್ರಕಟವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ