ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾರ್ಖಂಡ್: ಇಲ್ಲಿ ಏನಿದ್ದರೂ 'ರೂಲರ್ಸ್ ಡೆವಲಪ್‌ಮೆಂಟ್'! (Jharkhand | leaders | amass | wealth)
Feedback Print Bookmark and Share
 
PTI
ಜಾರ್ಖಂಡ್‌ ಅಂತಹ ಅಭಿವೃದ್ಧಿ ಕಾಣದಿರಬಹುದು. ಅಲ್ಲಿ ಜನತೆ ದಿನೇದಿನೇ ಬಡವರಾಗುತ್ತಲೇ ಹೋಗತ್ತಿರಬಹುದು. ನಕ್ಸಲರ ಉಪಟಳ ಹೆಚ್ಚುತ್ತಿರಬಹುದು. ಆದರೆ ಅಲ್ಲಿನ ನಾಯಕರ ಅಭಿವೃದ್ಧಿ ಮಾತ್ರ ಯಾವ ಎಗ್ಗಿಲ್ಲದೆ ಸಾಗುತ್ತಿದೆ. ಚುನಾವಣೆಗೆ ವೇಳೆ ಈ ಜನನಾಯಕರು ಸಲ್ಲಿಸಿದ ಅಫಿದಾವಿತ್‌ಗಳು ಇದನ್ನು ಸಾಬೀತು ಪಡಿಸುತ್ತದೆ.

ರಾಜಕೀಯಕ್ಕೆ ಇಳಿಯುವ ಮುನ್ನ ದಿನಗೂಲಿಗಳು, ರಿಕ್ಷಾ ಎಳೆಯುತ್ತಿದ್ದವರೆಲ್ಲ ಇದೀಗ ವ್ಯಾಪಾರೋದ್ಯಮಿಗಳಾಗಿದ್ದು, ಕಾರು ಬಂಗಲೆ ಮುಂತಾದವುಗಳನ್ನು ಹೊಂದಿದ್ದು, ಸಂಪತ್ತೆಂಬುದೀಗ ಅವರ ಬಳಿ ಕೊಳೆಯುವಂತಾಗಿದೆ.

ಬಹುಕೋಟಿ ಹವಾಲಾ ಪ್ರಕರಣದಲ್ಲಿ ಸಿಕ್ಕಿ ಸುದ್ದಿಯಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ದಿನಗೂಲಿಯಾಗಿದ್ದವರು. 2005ರಲ್ಲಿ ಅವರಿಗಿದ್ದ ಆಸ್ತಿಯ ಮೌಲ್ಯ 24.25 ಲಕ್ಷವಾಗಿತ್ತು. 2009ರ ವೇಳೆಗೆ ಅವರ ಆಸ್ತಿ(ಘೋಷಿತ) 1.17ಕೋಟಿಗೆ ಏರಿದೆ.

ಕೋಡಾ ಅವರ ಸಹೋದ್ಯೋಗಿಗಳಾಗಿದ್ದ ಹರಿನಾರಾಯಣ ರಾಯ್ ಹಾಗೂ ಇನೋಸ್ ಎಕ್ಕಾ ಅವರುಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಕಾರಣ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ ಚುನಾವಣೆಗೆ ಸ್ಫರ್ಧಿಸಿದ್ದಾಗ, ಇವರ ಆದಾಯ ತಲಾ 18 ಲಕ್ಷ ಹಾಗೂ 2.20 ಲಕ್ಷವಾಗಿತ್ತು.

ಇತ್ತಿಚಿನ ಘೋಷಣೆಗಳ ಪ್ರಕಾರ ಎಕ್ಕಾ ಅವರ ಆಸ್ತಿ 1.40 ಲಕ್ಷ ಆಗಿದ್ದರೆ, ರಾಯ್ ಆಸ್ತಿ 3.23 ಕೋಟಿ. ಇದು ಅವರು ನಿಜವಾಗಿ ಹೊಂದಿರುವ ಆಸ್ತಿಯಲ್ಲಿ ತೃಣಮಾತ್ರ.

90ರ ದಶಕದಲ್ಲಿ ಎಕ್ಕಾ ಇಂದಿರಾ ಆವಾಜ್ ಯೋಜನಾದ ಮನೆಯಲ್ಲಿದ್ದರೆ, ಈಗ ಅವರು ಎರಡು ಬಂಗಲೆಗಳ ಒಡೆಯ. ಮತ್ತು ಅದರ ಬೆಲೆ 18 ಲಕ್ಷ ರೂಪಾಯಿ. ಅವರಬಳಿ ಆಸ್ತಿಯೇ ಇರಲಿಲ್ಲ. ಆದರೀಗ 19 ಎಕರೆ ಭೂಮಿ ಇದೆ. ಅವರ ಬಳಿ ಇರುವ ಎಲ್ಲಾ ಕಾರುಗಳ ಒಟ್ಟು ಬೆಲೆ 25 ಲಕ್ಷ ರೂಪಾಯಿ. ಅವರ ಬಳಿ ಫೋರ್ಡ್ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು, ಮೋಟಾರ್‌ಬೈಕ್ ಮತ್ತು ಒಂದು ಟ್ರಾಕ್ಟರ್ ಇದೆ.

ಕೆಲವು ವರ್ಷಗಳ ಹಿಂದೆ ಹರಿನಾರಾಯಣ ರಾಯ್ ಅವರಿಗೆ ಒಂದು ಮೋಟಾರ್ ಬೈಕ್ ಮಾತ್ರವಿತ್ತು. ಇಂದು ಅವರ ಬಳಿ ಸ್ಕಾರ್ಪಿಯೋ ಕಾರು, 55.54 ಲಕ್ಷ ರೂಪಾಯಿ ಬೆಲೆಯ ಮನೆ ಇದೆ. ಈ ಮನೆ ಮಾತ್ರ ಹರಿನಾರಾಯಣ್ ಹೆಸರಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ