ಸಂಸತ್‌ನ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ನನ್ನನ್ನು ಉಪ ನಾಯಕಿಯನ್ನಾಗಿ ನೇಮಿಸಿರುವ ಕಾರಣ ತಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸುಷ್ಮಾಸ್ವರಾಜ್ ತಿಳಿಸಿದ್ದಾರೆ.
ಅಡ್ವಾಣಿ ನನ್ನನ್ನು ಅವರ ಉಪನಾಯಕಿ ಸ್ಥಾನಕ್ಕೆ ನೇಮಿಸಿರುವುದು ಸಹ ಪಕ್ಷಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದಂತೆ ಎನ್ನುವ ಮೂಲಕ ಅಡ್ವಾಣಿಯ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ವಿಷಯದ ಪ್ರಸ್ತಾಪವನ್ನು ವಿವರಿಸಲು ನಿರಾಕರಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ನನ್ನನ್ನು ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಒಮ್ಮೆ ಕೇಳಿಕೊಂಡಿದ್ದರು. ಆದರೆ ನಾನು ಅವರಿಗೆ ಪರಿಸ್ಥಿತಿಯನ್ನು ತಿಳಿಹೇಳಿದೆ ಎಂದರು.
ಆರ್‌ಎಸ್‌ಎಸ್ ಪ್ರಮುಖ ಪ್ರಚಾರಕರಾದ ಮನಮೋಹನ್ ವೈದ್ಯ ಬುಧವಾರ ಬಿಜೆಪಿ ನಾಲ್ಕು ರಾಷ್ಟ್ರೀಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್ ಹಾಗೂ ವೆಂಕಯ್ಯ ನಾಯ್ಡುರಲ್ಲಿ ಒಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ಮಾಧ್ಯಮದಲ್ಲಿ ವರದಿಯಾಗಿರುವಂತೆ ವಿರೋಧವಿರಲಿಲ್ಲ. ಬದಲಾಗಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಹೇಳಿಕೆ ನೀಡಿದ್ದರು.
ಆರ್‌ಎಸ್‌ಎಸ್ ಹೇಳಿಕೆಯನ್ನು ಪ್ರಸ್ತಾಪಿಸಿದ ಸುಷ್ಮಾ, ಮಾಧ್ಯಮದಲ್ಲಿನ ಆಧಾರ ರಹಿತ ವರದಿಗಳಿಗೆ ಸಮರ್ಥನೆ ನೀಡುವುದು ಸಂಘಕ್ಕೆ ಅನಿವಾರ್ಯವಾಗಿತ್ತು. ವೈದ್ಯರವರು ಹೇಳಿದಂತೆ ನಿತಿನ್ ಗಡ್ಕರಿ ಅವರ ಹೆಸರನ್ನು ಪಕ್ಷದೊಳಗೆ ಚರ್ಚಿಸಿ ನಂತರ ಆರ್‌ಎಸ್‌ಎಸ್‌ಗೆ ಅನುಮೋದಿಸುವಂತೆ ಕೋರಲಾಗಿತ್ತು ಎಂದರು.