ತನ್ನ ಸಹೋದರ ರಾಹುಲ್ ಗಾಂಧಿ ಜತೆ ಶುಕ್ರವಾರ ಅಮೇಥಿಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ತಾನೇ ಸ್ವತಹ ಕಾರು ಚಲಾಯಿಸಿ ಜನರಲ್ಲಿ ಅಚ್ಚರಿ ಮೂಡಿಸಿದರು. ಅವರ ಪಕ್ಕದಲ್ಲಿ ಸಹೋದರ ರಾಹುಲ್ ಗಾಂಧಿ ಆಸೀನರಾಗಿದ್ದರು.
ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅವಲೋಕನ ಮಾಡಲು ರಾಹುಲ್ ತನ್ನ ಕ್ಷೇತ್ರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ಜತೆಯಾಗಿದ್ದರು.
ರಾಯ್ಬರೇಲಿ ಜಿಲ್ಲೆಯ ಫುರಸತ್ಗಂಜ್ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಪ್ರಿಯಾಂಕಾ, ಚಾಲಕನ ಸೀಟಿನಲ್ಲಿ ಕುಳಿತು ಕಾರು ಓಡಿಸಿದರು. ರಾಹುಲ್ ಅವರ ಜತೆಗಿದ್ದರು. ಗೌರಿಗಂಜ್ ಬಳಿಯ ಗ್ರಾಮವೊಂದರಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರ ಬಳಿ ಈ ಇಬ್ಬರೂ ಸಂವಾದ ನಡೆಸಿದರು.