ಮಾಜಿ ಕಾಮ್ರೇಡ್ ಮನೆ ಸ್ಫೋಟ

ಛಾತ್ರಾ, ಭಾನುವಾರ, 22 ನವೆಂಬರ್ 2009( 12:31 IST )
ಮಾವೋವಾದಿಗಳು ಜಿಲ್ಲೆಯ ಚರ್ಕಾಲಾ ಗ್ರಾಮದ ಮಾಜಿ ಮಾವೋವಾದಿ ಸಹಚರನ ಮನೆಯೊಂದನ್ನು ಸ್ಫೋಟಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ನೆಹಾಲ್ ಖಾನ್ ಎಂಬವರ ನಿವಾಸಕ್ಕೆ ಕಳೆದ ರಾತ್ರಿ ತೆರಳಿದ ಮಾವೋವಾದಿಗಳು ಮನೆಯಲ್ಲಿದ್ದ ಅವರ ಕುಟುಂಬವನ್ನು ಹೊರಕ್ಕೆ ಕಳಿಸಿ, ಡೈನಾಮೈಟ್ ಸ್ಫೋಟಿಸಿದರೆಂದು ಪೊಲೀಸ್ ಸೂಪರಿಂಟೆಂಡೆಂಟ್ ಡಿ.ಬಿ. ಶರ್ಮಾ ತಿಳಿಸಿದ್ದಾರೆ.
ಈ ಘಟನೆ ನಡೆದಾಗ ಖಾನ್ ಮನೆಯಲ್ಲಿರಲಿಲ್ಲವೆಂದು ತಿಳಿದುಬಂದಿದೆ. ಮಾವೋವಾದಿಗಳು ಚೀಟಿಯೊಂದನ್ನು ಬಿಟ್ಟು ಹೋಗಿದ್ದು, ಖಾನ್ ನಮ್ಮ ಹಣವನ್ನು ತೆಗೆದುಕೊಂಡು ಓಡಿಹೋಗಿದ್ದಾನೆಂದು ಮಾವೋವಾದಿಗಳು ಚೀಟಿಯಲ್ಲಿ ಬರೆದಿದ್ದಾರೆ.