ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಲ್ಫಾ ಉಗ್ರರ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ (Nalbari | Mumbai | Lashkar | Terrorism)
Feedback Print Bookmark and Share
 
ಕೆಳಅಸ್ಸಾಂನ ನಲ್ಬಾರಿ ಜಿಲ್ಲೆಯಲ್ಲಿ ಭಾನುವಾರ ಸ್ವದೇಶಿ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದು, ತ್ರಿವಳಿ ಬಾಂಬ್ ಸ್ಫೋಟಗಳಿಗೆ ಆರು ಮಂದಿ ಬಲಿಯಾಗಿದ್ದು, 25 ಜನರು ಗಾಯಗೊಂಡಿದ್ದಾರೆ. ಬೆಳಿಗ್ಗೆ 10.15ಕ್ಕೆ ನಲ್ಬಾರಿ ಜಿಲ್ಲೆಯ ಪೊಲೀಸ್ ಠಾಣೆಯ ಹೊರಗೆ ಸುಮಾರು 10.15 ಗಂಟೆಗೆ ಸ್ಫೋಟ ಸಂಭವಿಸಿದೆ. ನಿಲ್ಲಿಸಿದ್ದ ಸೈಕಲ್‌ಗಳಲ್ಲಿ ಈ ಬಾಂಬ್‌ಗಳನ್ನು ಹುದುಗಿಸಿಡಲಾಗಿತ್ತೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 26ರಂದು ಮುಂಬೈನಲ್ಲಿ ಭಯೋತ್ಪಾದನೆ ದಾಳಿಗಳ ಮ‌ೂಲಕ ಪಾಕಿಸ್ತಾನಿ ಉಗ್ರಗಾಮಿಗಳು ತಲ್ಲಣ ಮ‌ೂಡಿಸಿದ್ದರು. ಮುಂಬೈ ಭಯೋತ್ಪಾದನೆ ಸಂಭವಿಸಿದ ವಾರ್ಷಿಕದ ಹಿನ್ನೆಲೆಯಲ್ಲಿ ಮತ್ತೆ ಲಷ್ಕರೆ ಉಗ್ರಗಾಮಿಗಳು ದಾಳಿ ಮಾಡಬಹುದೆಂಬ ಭೀತಿ ಆವರಿಸಿದ್ದು, ಭದ್ರತಾ ಪಡೆ ಮತ್ತು ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಆದರೆ ಅಸ್ಸಾಂನಲ್ಲಿ ನಡೆದಿರುವ ಸ್ಫೋಟದಲ್ಲಿ ವಿದೇಶಿ ಉಗ್ರಗಾಮಿಗಳ ಕೈವಾಡದ ಬದಲಿಗೆ ಸ್ಥಳೀಯ ಉಲ್ಫಾ ಉಗ್ರಗಾಮಿಗಳ ಕೈವಾಡವಿದೆಯೆಂದು ಶಂಕಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಲ್ಫಾ ಉಗ್ರಗಾಮಿಗಳು ಮತ್ತು ಪಾಕ್ ಉಗ್ರಗಾಮಿಗಳ ನಡುವೆ ನಂಟಿದೆಯೆಂಬ ಸಂಶಯ ಆವರಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಬಾಂಬ್ ಸ್ಫೋಟದ ವಿಧಾನ ಗಮನಿಸಿದರೆ ಮೇಲ್ನೋಟಕ್ಕೆ ಉಲ್ಫಾ ಉಗ್ರಗಾಮಿಗಳ ಕೈವಾಡವನ್ನು ಶಂಕಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ