ಬೊಫೋರ್ಸ್ ಹಗರಣದ ಆರೋಪಿ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಕುರಿತ ಮಾಹಿತಿಯನ್ನು 'ಮಾಹಿತಿ ಹಕ್ಕು ಕಾಯ್ದೆ' ಅನ್ವಯ ಯಾಚಿಸಲಾಗಿದ್ದ ಮಾಹಿತಿಯನ್ನು ನೀಡಲು ಸಿಬಿಐ ನಿರಾಕರಿಸಿದೆ. ಕ್ವಟ್ರೋಚಿ ವಿರುದ್ಧದ ಮೊಕದ್ದಮೆಯನ್ನು ಕೈಬಿಡಲು ಸಿಬಿಐ ನಿರ್ಧರಿಸಿದೆ.
ಹೀಗೆ ನೀಡುವ ಮಾಹಿತಿಯಿಂದ ಆರೋಪಿಯ ವಿರುದ್ಧ ಪ್ರಕರಣ ಹೂಡುವುದಕ್ಕೆ ಅಡ್ಡಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮಾಹಿತಿ ನೀಡದಿರಲು ಸಿಬಿಐ ನಿರ್ಧರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಟ್ರೋಚಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಇನ್ನಿತರೆ ಅರ್ಜಿಗಳು ವಿಚಾರಣೆಗೆ ಬಾಕಿ ಇದೆ ಎಂದು ಸಿಬಿಐ ತಿಳಿಸಿದೆ.
ವಕೀಲ ಅಜಯ್ ಅಗರ್‌ವಾಲ್ ಅವರು ಕ್ವಟ್ರೋಚಿ ಬಗ್ಗೆ ವಿವರಣೆ ಕೋರಿ 'ಮಾಹಿತಿ ಹಕ್ಕು ಕಾಯ್ದೆ' ಅನ್ವಯ ಅರ್ಜಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಸಿಬಿಐ ಈ ಪ್ರತಿಕ್ರಿಯೆ ನೀಡಿದೆ.