ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇತ್ತೀಚೆಗೆ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಮೇಲೆ ನಡೆದಿರುವ ಹಲ್ಲೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್)ವೇ ಕಾರಣ ಎಂದು ದೂರಿರುವ ವಿಶ್ವಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಇದರ ನಾಯಕ ರಾಜ್ ಠಾಕ್ರೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾಷೆಯ ಆಧಾರದಲ್ಲಿ ಎಂಎನ್ಎಸ್ ದೇಶವನ್ನು ಒಡೆಯಲು ಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ. ಅಜ್ಮಿ ಮೇಲೆ ನಡೆದಿರುವ ದಾಳಿಯನ್ನು ಮತಬ್ಯಾಂಕ್ ರಾಜಕಾರಣ ಎಂದು ಆಪಾದಿಸಿರುವ ಅವರು ಹಿಂದಿ ಭಾಷೆಯನ್ನು ವಿರೋಧಿಸುವ ಮೂಲಕ ರಾಷ್ಟ್ರವನ್ನು ಒಡೆಯವಲ್ಲಿ ರಾಜ್ ಠಾಕ್ರೆ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
"ಮಹಾರಾಷ್ಟ್ರವನ್ನು ಭಾಷೆಯ ಆಧಾರದಲ್ಲಿ ಒಡೆಯಲು ಯತ್ನಿಸುವವರನ್ನು ಶಿಕ್ಷಿಸಬೇಕು" ಎಂದು ಅವರು ಹೇಳಿದ್ದಾರಲ್ಲದೆ, ರಾಜ್ ಠಾಕ್ರೆ ಹಿಂದಿಯನ್ನು ಅವಮಾನಿಸಿಲ್ಲ ಅವರು ರಾಷ್ಟ್ರಭಾಷೆಯನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.