ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಧಿವೇಶನದ ವೇಳೆ ಲಿಬರಾನ್ ವರದಿ ಸೋರಲು ಕಾರಣವೇನು? (Liberhan report | Babri Masjid | Parliament)
Feedback Print Bookmark and Share
 
ಸಂಸತ್ ಅಧಿವೇಶನ ನಡೆಯುತ್ತಿರುವ ವೇಳೆ ಲಿಬರಾನ್ ವರದಿಯು ಹೇಗೆ ಸೋರಿಕೆಯಾಯಿತು ಎಂಬುದಾಗಿ, ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಆಘಾತ ವ್ಯಕ್ತಪಡಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಕುರಿತು ತನಿಖೆಗಾಗಿ ನೇಮಿಸಲಾಗಿರುವ ಲಿಬರಾನ್ ಆಯೋಗದ ವರದಿಯ ಒಂದು ಭಾಗವಷ್ಟೆ ಸೋರಿಕೆಯಾಗಲು ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ.

"ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನು ನೋಡಿ ತನಗೆ ಆಘಾತವಾಗಿದೆ. ಈ ವರದಿಯನ್ನು ಯಾರು ಸೋರಿಕೆ ಮಾಡಿದ್ದಾರೆ ಮತ್ತು ಯಾಕಾಗಿ ಸೋರಿಕೆ ಮಾಡಿದ್ದಾರೆ ಎಂಬುದನ್ನು ತಾನು ತಿಳಿಯಲು ಇಚ್ಚಿಸಿದ್ದೇನೆ" ಎಂದು ಲೋಕಸಭೆಯನ್ನು ಮಾತಾನಾಡುತ್ತಿದ್ದ ಆಡ್ವಾಣಿ ಪ್ರಶ್ನಿಸಿದರು.

ವರದಿಯ ವಿಶ್ವಾಸಾರ್ಹತೆಯ ಕುರಿತು ಪ್ರಸ್ತಾಪಿಸಿದ ಅವರು, ಪತ್ರಿಕೆಯ ಸಂಪಾದಕರು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ವರದಿಯು ಅಧಿಕೃತವೆಂದು ದೃಢೀಕರಿಸಿದ್ದಾಗಿರುವುದಾಗಿ ಹೇಳಿದರು. ಈ ವರದಿಯಲ್ಲಿ ಪ್ರಸ್ತಾಪಿರುವ "ಗೃಹ ಸಚಿವಾಲಯದ ಮೂಲಗಳು ಮಾಹಿತಿ ನೀಡಿರುವಂತೆ" ಎಂಬ ವಾಕ್ಯವನ್ನು ಅವರು ಉದ್ಧರಿಸಿದರು.

1992ರ ಡಿಸೆಂಬರ್ 6ರಂದು ನಡೆದಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ಲಿಬರಾನ್ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಇತರ ನಾಯಕರನ್ನು ತಪ್ಪಿತಸ್ಥರೆಂದು ಬೆಟ್ಟು ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂಬ ಪತ್ರಿಕಾ ವರದಿ ಲೋಕಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.

"ವರದಿಯಲ್ಲಿ ನನ್ನ ಮೇಲೆ ಆರೋಪಹೊರಿಸಲಾಗಿದ್ದು, ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಆದರೆ ವಾಜಪೇಯಿವರ ಘನತೆ ಹಾಗೂ ಅವರ ಪ್ರಸಕ್ತ ಆರೋಗ್ಯ ಸ್ಥಿತಿಯ ಮಧ್ಯೆ ಅವರ ಹೆಸರನ್ನು ಪ್ರಸ್ತಾಪಿಸಿರುವುದು ತನಗೆ ಆಘಾತ ನೀಡಿದೆ" ಎಂಬುದಾಗಿ ಅವರು ಹೇಳಿದ್ದಾರೆ.

ವರದಿಯನ್ನು ಜೂನ್ 30ರಂದು ಸಲ್ಲಿಸಲಾಗಿದ್ದು ಸರ್ಕಾರ ಅದನ್ನು ಸಂಸತ್ತಿನಲ್ಲಿ ಮಂಡಿಸಿಲ್ಲ. ಆದರೆ ಸಂಸತ್ ಅಧಿವೇಶನ ನಡೆಯುತ್ತಿರುವಾಗ ಈ ವರದಿಯ ಒಂದು ಭಾಗವಷ್ಟೆ ಸೋರಿಕೆಯಾಗಲು ಏನುಕಾರಣ ಎಂದು ಪ್ರಶ್ನಿಸಿದ ಅವರು ಸಂಸತ್ತಿನ ಘನತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ