ಭಾರತದ ಅಣ್ವಸ್ತ್ರ ಒಯ್ಯುವ ಸಾಮರ್ಥ್ಯದ ಮಧ್ಯಗಾಮಿ ವ್ಯಾಪ್ತಿಯ ಅಗ್ನಿ-2 ಕ್ಷಿಪಣಿಯನ್ನು ಸೋಮವಾರ ಸಂಜೆ ಸೂರ್ಯಾಸ್ತದ ಸ್ವಲ್ಪ ಸಮಯದಲ್ಲೇ ಪರೀಕ್ಷಾರ್ಥ ಪ್ರಯೋಗಿಸಲಾಗಿದ್ದು, ನಿರೀಕ್ಷಿತ ಫಲಿತಾಂಶ ಬರುವಲ್ಲಿ ವಿಫಲವಾಗಿದೆ. ಸೇನೆ ನೆಲದಿಂದ ನೆಲಕ್ಕೆ ಜಿಗಿಯುವ ಖಂಡಾಂತರ ಕ್ಷಿಪಣಿಯನ್ನು ಭದ್ರತ್ ಜಿಲ್ಲೆಯ ವೀಲರ್ಸ್ ದ್ವೀಪದ ಪರೀಕ್ಷಾ ನೆಲೆಯಿಂದ ರಾತ್ರಿ 7.50ಕ್ಕೆ ಪರೀಕ್ಷಾರ್ಥ ಪ್ರಯೋಗಿಸಲಾಯಿತು.
ಉಡಾವಣೆ ಮತ್ತು ಮೊದಲನೇ ಹಂತದ ಪ್ರತ್ಯೇಕತೆ ಸುಗಮವಾಗಿದ್ದು, ಎರಡನೇ ಹಂತದ ಪರೀಕ್ಷೆಗೆ ಸ್ವಲ್ಪ ಮುಂಚೆ ತನ್ನ ನಿಗದಿತ ಮಾರ್ಗವನ್ನು ಬದಲಿಸಿ ದಾರಿತಪ್ಪಿತು. ಇದಕ್ಕೆ ಕಾರಣ ದೃಢಪಡಿಕೆಗೆ ಇನ್ನಷ್ಟು ವಿಶ್ಲೇಷಣೆ ಅಗತ್ಯವಾಗಿದೆಯೆಂದು ಮೂಲಗಳು ಹೇಳಿವೆ.ಸೋಮವಾರದ ತಾಲೀಮಿನ ಇಡೀ ವಿದ್ಯಮಾನವನ್ನು ಅತ್ಯಾಧುನಿಕ ರೆಡಾರ್‌ಗಳ ಬ್ಯಾಟರಿ, ಟೆಲಿಮಿಟ್ರಿ ವೀಕ್ಷಣಾ ನಿಲ್ದಾಣಗಳು ಮತ್ತು ಎಲಕ್ಟ್ರೋ ಆಪ್ಟಿಕ್ ಉಪಕರಣಗಳು ಮತ್ತು ನೌಕೆಯೊಂದು ಜಾಡು ಹಿಡಿಯಿತು.
ಅಣ್ವಸ್ತ್ರ ಸಾಮರ್ಥ್ಯದ 2000 ಕಿಮೀ ವ್ಯಾಪ್ತಿಯ ಕ್ಷಿಪಣಿ 20 ಮೀಟರ್ ಉದ್ದವಾಗಿದ್ದು. ಒಂದು ಮೀಟರ್ ವ್ಯಾಸ, 17 ಟನ್ ತೂಕ ಮತತ್ 1000 ಕೇಜಿ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.ಭಾರತದ ಆಯಕಟ್ಟಿನ ದೃಷ್ಟಿಯಿಂದ ಈ ಪ್ರಯೋಗ ಮಹತ್ವ ಪಡೆದಿದೆ. ಏಕೆಂದರೆ ಡಿಆರ್‌ಡಿಒ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ ಆರಂಭವಾದಾಗಿನಿಂದ ಪ್ರಥಮ ಬಾರಿಗೆ ಕ್ಷಿಪಣಿಯೊಂದನ್ನು ರಾತ್ರಿ ಸಂದರ್ಭದ ತಾಲೀಮಿಗೆ ಒಳಪಡಿಸಲಾಗಿತ್ತು.