ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಎಟಿಆರ್: ಕೋಮು ಸಂಘರ್ಷ ತಡೆಗೆ ಹೊಸ ಕಾಯಿದೆ ಪ್ರಸ್ತಾಪ (Ayodhya | Babri Masjid | Ram Mandir | Liberhan Commission | ATR)
Bookmark and Share Feedback Print
 
ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೆಬರ್ಹಾನ್ ಆಯೋಗವು 68 ಮಂದಿ ಬಿಜೆಪಿ, ಸಂಘ ಪರಿವಾರದ ಸದಸ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರೂ, ಈ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮಂಡಿಸಿದ ಕ್ರಮ ಕೈಗೊಂಡ ವರದಿ (ಎಟಿಆರ್)ಯಲ್ಲಿ ಯಾವುದೇ ಹೆಸರನ್ನೂ ಉಲ್ಲೇಖಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಲಿಬರ್ಹಾನ್ ಆಯೋಗದ ವರದಿ ಆಧಾರದಲ್ಲಿ ಹೊಸದಾಗಿ ಕ್ರಮ ಕೈಗೊಳ್ಳಬೇಕಾಗಿದ್ದ ಯಾರದೇ ಹೆಸರನ್ನೂ ಎಟಿಆರ್‌ನಲ್ಲಿ ಉಲ್ಲೇಖಿಸಿಲ್ಲ. ಅಂದರೆ, ಹೊಸದಾಗಿ ಯಾರ ವಿರುದ್ಧವೂ ಆರೋಪಗಳನ್ನು ದಾಖಲಿಸಲಾಗುವುದಿಲ್ಲ.

ವಿಶೇಷವೆಂದರೆ, 13 ಪುಟಗಳ ಎಟಿಆರ್‌ನಲ್ಲಿ ಹೊಸ ಕಾಯಿದೆಯೊಂದರ ಪ್ರಸ್ತಾಪವಿದೆ. ಅದೆಂದರೆ, ಸರಕಾರದ ಹುದ್ದೆಯಲ್ಲಿರುವ ಯಾವುದೇ ರಾಜಕೀಯ ನಾಯಕ, ಜೊತೆಯಾಗಿ ಧಾರ್ಮಿಕ ಸಂಸ್ಥೆಗಳ ಯಾವುದೇ ಹುದ್ದೆ ನಿರ್ವಹಿಸಲು ಅವಕಾಶ ಇರುವುದಿಲ್ಲ.

ಕಟ್ಟಡ ಧ್ವಂಸದ ಹಿಂದಿರುವವರ ಮೇಲೆ ಹೊಸದಾಗಿ ಕೇಸು ದಾಖಲಿಸದಿರುವ ತನ್ನ ನಿರ್ಧಾರಕ್ಕೆ ಸರಕಾರ ನೀಡಿರುವ ಕಾರಣ, ಈಗಾಗಲೇ ಆರೋಪಿಗಳ ವಿರುದ್ಧ ಸಾಕಷ್ಟು ಕೇಸುಗಳನ್ನು ದಾಖಲಿಸಲಾಗಿದ್ದು, ಅವಿನ್ನೂ ವಿಚಾರಣೆಯಲ್ಲಿವೆ. ಹೀಗಾಗಿ ಹೊಸದಾಗಿ ಕೇಸು ದಾಖಲಿಸುವುದು ಅನಗತ್ಯ.

ಕೋಮು ಹಿಂಸಾಚಾರ ತಡೆಗೆ ಹೊಸ ಮಸೂದೆ ಮಂಡಿಸುವ ಕುರಿತೂ ಸರಕಾರ ಚಿಂತಿಸುತ್ತಿದೆ. ರಾಜಕೀಯ ಮತ್ತು ಧರ್ಮದ ಅಪಾಯಕಾರಿ ಮಿಶ್ರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮಸೂದೆ ಸಹಕಾರಿಯಾಗಬಹುದು ಎಂಬುದು ಸರಕಾರದ ವಿಶ್ವಾಸ.

ಅದಲ್ಲದೆ, ಕೋಮು ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಏಕತಾ ಮಂಡಳಿ (ಎನ್ಐಸಿ)ಗೆ ಸ್ವಾಯತ್ತ ಅಧಿಕಾರ ನೀಡುವ ಕುರಿತಾಗಿಯೂ ಕೇಂದ್ರವು ಚಿಂತಿಸುತ್ತಿದೆ.

ಮಂಗಳವಾರ ಬೆಳಿಗ್ಗೆ ವರದಿಗೆ ಸಂಬಂಧಿಸಿದಂತೆ ನಡೆದ ತುರ್ತು ಸಭೆಯಲ್ಲಿ, ಎಟಿಆರ್ ಮಂಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ