ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11 ಪ್ರಥಮವಾರ್ಷಿಕ :ಪ್ರಾಸಿಕ್ಯೂಷನ್ ವಿಚಾರಣೆ ಅಂತ್ಯ (Terror attack | Prosecution | Witness | Nikam)
Bookmark and Share Feedback Print
 
ಮುಂಬೈ ಭಯೋತ್ಪಾದನೆ ದಾಳಿಯ ಪ್ರಥಮ ವಾರ್ಷಿಕಕ್ಕೆ ಹೊಂದಿಕೆಯಾಗುವಂತೆ ಪ್ರಾಸಿಕ್ಯೂಷನ್ ವಿಶೇಷ ಕೋರ್ಟ್‌ನಲ್ಲಿ ಪ್ರಕರಣವನ್ನು ಮುಗಿಸಲು ಸಿದ್ಧತೆ ನಡೆಸಿದೆ. ನಾವು 265 ಸಾಕ್ಷಿಗಳ ಪರಿಶೀಲನೆ ನಡೆಸಿದ್ದು, 10 ಜನ ಸಾಕ್ಷಿಗಳು ಬಾಕಿವುಳಿದಿದ್ದಾರೆ. ನವೆಂಬರ್ 26ರೊಳಗೆ ಪ್ರಕರಣದ ಪ್ರಕ್ರಿಯೆಯನ್ನು ಮುಗಿಸುವುದಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ತಿಳಿಸಿದ್ದಾರೆ.

ಇನ್ನೂ 300 ಜನರ ಸಾಕ್ಷಿಗಳ ಪ್ರಮಾಣಪತ್ರಗಳನ್ನು ಕೋರ್ಟ್‌ಗೆ ಸಲ್ಲಿಸುವ ಮ‌ೂಲಕ ಅವರ ಸಾಕ್ಷಿಗಳನ್ನು ಪಡೆಯಲಾಗುವುದು. ಈ ಸಾಕ್ಷಿಗಳನ್ನು ಖುದ್ದಾಗಿ ವಿಚಾರಣೆ ನಡೆಸುವುದಿಲ್ಲ. ಏಕೆಂದರೆ ಸಾಕ್ಷಿಗಳಲ್ಲಿ ಮೃತರ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದವರು, ಮೃತರ ಬಂಧುಗಳು, ಆಸ್ತಿಪಾಸ್ತಿಗಳಿಗೆ ಹಾನಿಯಾದವರು ಮತ್ತು ವೈದ್ಯಾಧಿಕಾರಿಗಳು ಸೇರಿದ್ದಾರೆಂದು ಪ್ರಾಸಿಕ್ಯೂಟರ್ ತಿಳಿಸಿದರು.

ಮೇ 8ರಂದು ವಿಚಾರಣೆ ಆರಂಭವಾಗಿದ್ದು, 6 ತಿಂಗಳುಗಳಲ್ಲಿ ನಾವು ಪ್ರಕರಣವನ್ನು ಮುಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ನಿಕಮ್ ಹೇಳಿದ್ದಾರೆ. ಪಾಕಿಸ್ತಾನದ ಬಂಧಿತ ಭಯೋತ್ಪಾದಕ ಅಜ್ಮಲ್ ಕಸಬ್ ಇಬ್ಬರು ಭಾರತೀಯರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಜತೆ ವಿಚಾರಣೆ ಎದುರಿಸುತ್ತಿದ್ದಾನೆ. ಕಸಬ್ ಹಲವಾರು ಹತ್ಯೆಗಳನ್ನು ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದರೆ, ಉಳಿದವರು ಒಳಸಂಚಿನ ಆರೋಪ ಹೊತ್ತಿದ್ದಾರೆ.

ಪ್ರಾಸಿಕ್ಯೂಷನ್ ವಿಚಾರಣೆ ಮುಗಿದ ಬಳಿಕ,ಪ್ರತಿವಾದಿ ವಕೀಲರಿಗೆ ಸಾಕ್ಷಿಗಳನ್ನು ತನಿಖೆ ಮಾಡುವ ಹಕ್ಕನ್ನು ಚಲಾಯಿಸಲಿದ್ದಾರೆ. ಬಳಿಕ ಆರೋಪಿಗಳು ತಮ್ಮ ವಿರುದ್ಧದ ಸಾಕ್ಷ್ಯಾಧಾರಗಳಿಗೆ ಕೋರ್ಟ್‌ಗೆ ಹೇಳಿಕೆಗಳನ್ನು ನೀಡಲಿದ್ದಾರೆ. ವಾದವಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ತನ್ನ ತೀರ್ಪನ್ನು ನೀಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ