ನಕ್ಸಲರ ಹಿಂಸಾಚಾರದ ಕರಿನೆರಳು ಚಾಚಿರುವ ನಡುವೆ, ಜಾರ್ಖಂಡ್ ಬುಧವಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದೆ. ಚುನಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಕ್ಸಲೀಯರು ಮತದಾನ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ರಾಜ್ಯ ಪೊಲೀಸರು ಮತ್ತು ಅರೆಮಿಲಿಟರಿ ಪಡೆಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಗಿದೆ.
ಮತದಾನ ನಡೆಯುವ 81 ವಿಭಾಗಗಳ ಪೈಕಿ 26 ವಿಭಾಗಗಳ ಗಡಿಗಳನ್ನು ಮುಚ್ಚಲಾಗಿದ್ದು, ಸೇನೆಯು ಎಲ್ಲ ಜಿಲ್ಲೆಗಳಲ್ಲಿ ಧ್ವಜಪಥಸಂಚಲನ ನಡೆಸಿದೆ. ಸುಮಾರು 200 ಮತಗಟ್ಟೆಗಳನ್ನು ಸೂಕ್ಷ್ಮವೆಂದು ಅಧಿಕಾರಿಗಳು ಘೋಷಿಸಿದ್ದಾರೆ.ಎನ್‌ಡಿಎ, ಬಾಬು ಲಾಲ್ ಮರಂಡಿಯ ಜಾರ್ಖಂಡ್ ವಿಕಾಸ್ ಮೋರ್ಚಾ ಜತೆ ಹೊಂದಾಣಿಕೆ ಮಾಡಿರುವ ಕಾಂಗ್ರೆಸ್ ಮತ್ತು ಜೆಎಂಎಂ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮೊದಲ ಹಂತದ ಚುನಾವಣೆಯಲ್ಲಿ 65,32,234 ಮತದಾರರು 470 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.ಇನ್ನುಳಿದ ನಾಲ್ಕು ಹಂತಗಳ ಮತದಾನ ಡಿ.18ರೊಳಕ್ಕೆ ಮುಗಿಯಲಿದ್ದು, ಫಲಿತಾಂಶ ಡಿ.23ಕ್ಕೆ ಪ್ರಕಟವಾಗಲಿದೆ.