ತನಗೆ ವಯಸ್ಸಾಗಿದೆ ಮತ್ತು ಪಕ್ಷದ ಯುವದಳವನ್ನು ಬಲಪಡಿಸಲು ತಾನು ಪರಿವರ್ತಕನ ಪಾತ್ರವನ್ನು ವಹಿಸುತ್ತಿದ್ದೇನೆ ಎಂಬುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ನಮ್ಮ ದೇಶದ ಜನಸಂಖ್ಯಾ ವಿಶ್ಲೇಷಣೆ ಮಾಡಿದರೆ ನನಗೆ ವಯಸ್ಸಾಗಿದೆ. ನನಗೆ 39 ವರ್ಷ. ನೀವು ರಾಷ್ಟ್ರದ ಜನಸಂಖ್ಯೆಯತ್ತ ಗಮನ ಹರಿಸಿದರೆ, ಶೇ.60 ರಷ್ಟು ಮಂದಿ 40 ವರ್ಷಕ್ಕಿಂತ ಒಳಗಿನವರು ಎಂದು ಸದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.
ನಾನು ದೇಶದ ಜನತೆಯನ್ನು ಅಥವಾ ಯವಕಾಂಗ್ರೆಸ್ಗೆ ಶಕ್ತಿ ನೀಡಿಲ್ಲ, ಬದಲಿಗೆ ಯುವಕರು ಅವರಾಗೆ ಶಕ್ತಿವಂತರಾಗಿದ್ದಾರೆ, ನಾನೊಬ್ಬ ಪರಿವರ್ತಕ ಅಷ್ಟೆ. ನಾನು ಯುವಕಾಂಗ್ರೆಸ್ನ ಸದಸ್ಯನೂ ಅಲ್ಲ. ಇದನ್ನೊಂದು ಚಲನಶೀಲ ಹಾಗೂ ಶಕ್ತಿಯುತ ಸಂಸ್ಥೆಯನ್ನಾಗಿಸುವುದು ನನ್ನ ಕೆಲಸ ಎಂದು ರಾಹುಲ್ ಗಾಂಧಿ ನುಡಿದರು.