ಮದುವೆ ಮನುಷ್ಯನ ಬದುಕಿನ ಅತಿದೊಡ್ಡ ಘಟನೆ. ಕೆಲವರಿಗೆ ಅದ್ಧೂರಿಯ ಮದುವೆ ಬೇಕಿದ್ದರೆ, ಮತ್ತೆ ಕೆಲವರದ್ದು ಸರಳ ವಿವಾಹ. ಇನ್ನೂ ಕೆಲವರದ್ದು ಸರ್ವ ಸಂಪ್ರದಾಯವನ್ನೊಳಗೊಂಡ ವಿವಾಹ. ಬಾಲಿವುಡ್ ಮಂದಿಯಂತೆ ಅದ್ಧೂರಿಯ ಮದುವೆಯಾಗಬೇಕೆಂಬ ಆಸೆ ಹಲವರಿಗಿದ್ದರೂ, ದುಬಾರಿ ಬೆಲೆಯ ಈ ಕಾಲದಲ್ಲಿ, ಸೀಮಿತ ಆದಾಯದ ಮಂದಿಗೆ ಅದು ಕನಸೇ ಸರಿ.
ಅಂತವರಿಗಾಗಿ ಇದೀಗ ಮದುವೆ ಇಂಡಸ್ಟ್ರೀ ಹುಟ್ಟಿಕೊಂಡಿದೆ. ನಿಮಗೆ ಬೇಕಾದಂತಹ ಡಿಸೈನರ್ ಮದುವೆಗಳು ಈಗ ನಿಮಗೆ ಲಭ್ಯ. ನಿಮ್ಮ ಮದುವೆಯನ್ನು ಒಂದು ಅಪರೂಪದ ಸ್ಮರಣೀಯ ಕ್ಷಣವನ್ನಾಗಿಸಲು ಈ ವಿವಾಹ ಯೋಜಕರು ಸಿದ್ಧ. ಎಲ್ಲಾ ಖರ್ಚುವೆಚ್ಚಗಳು ಮೂರು ಲಕ್ಷದೊಳಗೆ.
"ಮೇಲ್ವರ್ಗದವರು ಮಾತ್ರ ಡಿಸೈನರ್ ಮದ್ವೆ ಮಾಡ್ಕೋತಾರೆ ಎಂಬುದು ಭ್ರಮೆ. ಮಿಲಿಯಗಟ್ಟಲೆ ಡಾಲರ್ ಖರ್ಚು ಮಾಡಿಯೇ ಅದ್ಧೂರಿ ಮದುವೆಯಾಗಬೇಕೆಂದಿಲ್ಲ ಎಂಬುದಾಗಿ ಮದುವೆ ಯೋಜಕಿ ಸ್ವಾತಿ ಪಾಂಡ್ಯ ಸೂದ್ ಹೇಳುತ್ತಾರೆ. ಭಾರತದಲ್ಲಿನ ಮದುವೆಗಳು ಜೀವನಕ್ರಮಕ್ಕೆ ಸಂಬಂಧಿಸಿದ್ದು. ಇದನ್ನು ಅಲ್ಪವೆಚ್ಚದಲ್ಲೂ ಮಾಡಬಹುದು ಎಂಬುದು ಅವರ ಅಭಿಪ್ರಾಯ.