ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11: ಲೋಕಸಭೆಯಲ್ಲಿ ಪರಿಹಾರದ ರಾಜಕೀಯ (Mumbai Terror Attack | Parliament | New Delhi)
Bookmark and Share Feedback Print
 
26/11 ದಾಳಿಯಿಂದ ನೊಂದವರಿಗೆ ಸಾಂತ್ವಾನ ನೀಡಲು ವಿವಿಧ ಸಂಸ್ಥೆಗಳ ಸಮನ್ವಯ ಕಾರ್ಯದ ಕುರಿತು ಮಾಹಿತಿ ನೀಡುವಂತೆ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಅವರು ಕೇಳಿದಾಗ ಸರ್ಕಾರವು ಉತ್ತರಿಸಲು ನಿರ್ಲಕ್ಷಿಸಿದ್ದು, ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ ಹಾಗೂ ಭಾರತೀಯ ಜನತಾ ಪಕ್ಷದ ಸಂಸದರ ನಡುವೆ ಬಿಸಿಬಿಸಿ ಚರ್ಚೆಗೆ ನಾಂದಿಯಾಯಿತು.

ಶೂನ್ಯ ಅವಧಿಯ ವೇಳೆ ಆಡ್ವಾಣಿ ಅವರು ಈ ಪ್ರಶ್ನೆ ಕೇಳಿದ್ದು, ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ದಾಳಿಯಿಂದ ಹಾನಿಗೀಡಾಗಿರುವ 403ರಲ್ಲಿ 118 ಮಂದಿಗೆ ಮಾತ್ರ ಪರಿಹಾರ ವಿತರಣೆಯಾಗಿದೆ ಎಂಬುದಾಗಿ ಆಡ್ವಾಣಿ ತಮ್ಮ ಭಾಷಣದಲ್ಲಿ ಹೇಳಿದರು.

ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಕಚೇರಿಗಳು ಮುಂಬೈ ದಾಳಿಯ ಬಲಿಪಶುಗಳಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದವು ಎಂಬುದಾಗಿ ಆಡ್ವಾಣಿ ನುಡಿದರು.

"ಆದರೆ ಪರಿಹಾರವನ್ನು ನಿಧಾನಗತಿಯಲ್ಲಿ ಮಾಡಲಾಗುತ್ತಿದೆ" ಎಂದು ಅವರು ನುಡಿದರು. ಬಲಿಪಶುಗಳ ಕುಟುಂಬಗಳಿಗೆ ಪರಿಹಾರ ಚೆಕ್‌ಗಳನ್ನು ವಿತರಿಸುವಲ್ಲಿ ನಿಧಾನಗತಿಯನ್ನು ಅನುಸರಿಸಲಾಗುತ್ತಿದೆ ಎಂದು ಆಡ್ವಾಣಿ ದೂರಿದರು.

ಪರಿಹಾರ ಮತ್ತು ಪುನರ್ವಸತಿಯ ಪರಿಹಾರ ಚೆಕ್‌ಗಳನ್ನು ವಿತರಿಸಲು ಇದಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಸಮನ್ವಯಗೊಳಿಸಲು ಗೃಹಸಚಿವರು ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅವರು ಸಲಹೆ ಮಾಡಿದರು.

ಆಡ್ವಾಣಿ ಅವರ ಭಾಷಣ ಮುಗಿದ ತಕ್ಷಣ ಸ್ಪೀಕರ್ ಮೀರಾ ಕುಮಾರ್ ಅವರು ಕಾಂಗ್ರೆಸ್ ಸಂಸದ ಮಧು ಗೋಡ್ ಯಕ್ಷಿ ಅವರಿಗೆ ಇನ್ನೊಂದು ವಿಚಾರವನ್ನು ಮಂಡಿಸಲು ಅವಕಾಶ ನೀಡಿದರು.

ಆದರೆ, ಬಿಜೆಪಿ ಸಂಸದ ಅನಂತ್ ಕುಮಾರ್ ಅವರು ಲೋಕಸಭೆಯಲ್ಲಿ ಪ್ರಣಬ್ ಮುಖರ್ಜಿ ಅವರ ಪ್ರಸ್ತುತಿಯತ್ತ ಬೊಟ್ಟು ಮಾಡಿ, ಆಡ್ವಾಣಿಯವರ ಪ್ರಶ್ನೆಗೆ ಸರ್ಕಾರದ ಉತ್ತರಕ್ಕಾಗಿ ಒತ್ತಾಯಿಸಿದರು.

ಇದರಿಂದ ವ್ಯಗ್ರಗೊಂಡ ಪ್ರಣಬ್ ತಾನು ಸದನಕ್ಕೆ ವಿಪಕ್ಷ ನಾಯಕನ ಮಾತನ್ನು ಆಲಿಸಲು ಬಂದಿದ್ದೇನೆಯೇ ಹೊರತು ನಿಮ್ಮ ಮಾತನ್ನು ಆಲಿಸಲು ಅಲ್ಲ ಎಂಬುದಾಗಿ ಪ್ರತಿಕ್ರಿಯಿಸಿದರು. ಇದು ಅನಂತ ಕುಮಾರ್ ಮತ್ತು ಇತರ ಬಿಜೆಪಿ ಸಂಸದರನ್ನು ಕೆರಳಿಸಿದ್ದು, ಇವರುಗಳು ಹಾಗೂ ಪ್ರಣಬ್ ನಡುವೆ ಬಿಸಿಬಿಸಿ ಚರ್ಚೆಗೆ ನಾಂದಿಯಾಯಿತು.

ನೀವು ಮುಂಬೈ ದಾಳಿ ಕುರಿತು ರಾಜಕೀಯ ಮಾಡುತ್ತಿದ್ದೀರಿ ಎಂಬುದಾಗಿ ಪ್ರಣಬ್ ಖಾರವಾಗಿ ನುಡಿದರು. ಬಳಿಕ ಸ್ಪೀಕರ್ ಅವರು ಮಧ್ಯಪ್ರವೇಶಿಸಿದ್ದು, ಇದು ದುಃಖದ ದಿನವಾಗಿದ್ದು ನಾವು ಈ ಕುರಿತು ಮಸೂದೆ ಅಂಗೀಕರಿಸಿದ್ದೇವೆ ಎನ್ನುತ್ತಾ ಸಂಸದರನ್ನು ಸಮಾಧಾನಿಸಿದರು.

ಶೂನ್ಯ ವೇಳೆಯ ಪ್ರಶ್ನೆಗೆ ಉತ್ತರಿಸುವಂತೆ ತಾನು ಸಚಿವರನ್ನು ಕೇಳುವಂತಿಲ್ಲ ಎಂದೂ ಮೀರಾ ಕುಮಾರ್ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ