ಜಾರ್ಖಂಡ್‌ನ ಕುಂಟಿ ಜಿಲ್ಲೆಯ ಜರಂಗ ಗ್ರಾಮದಲ್ಲಿ ನಕ್ಸಲರು ಪೊಲೀಸ್ ಜೀಪನ್ನು ಸ್ಫೋಟಿಸಿದ್ದು ಪರಿಣಾಮ ಪೊಲೀಸೊಬ್ಬ ಸಾವನ್ನಪ್ಪಿದ್ದರೆ, ಇತರ ನಾಲ್ವರು ಗಾಯಗೊಂಡಿದ್ದಾರೆ.
ಸ್ಫೋಟದ ಪರಿಣಾಮದಿಂದಾಗಿ ಜೀಪು ತಲೆಕೆಳಗಾಗಿ ಉರುಳಿಬಿದ್ದಿದೆ ಎಂಬುದಾಗಿ ಹೇಳಿರುವ ಐಜಿಪಿ ವಿ. ದೇಶ್‌ಮುಖ್ ಅವರು ನೆಲಬಾಂಬ್ ಸ್ಫೋಟದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಗಾಯಗೊಂಡವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇವೇಳೆ ನಕ್ಸಲರು ಚಾತ್ರ ಜಿಲ್ಲೆಯ ಪ್ರತಾಪ್‌ಪುರದಲ್ಲಿ ಮಾಧ್ಯಮಿಕ ಶಾಲೆಯೊಂದನ್ನು ಸ್ಫೋಟಿಸಿದ್ದಾರೆ. ಇದೇ ಶಾಲೆಯಲ್ಲಿ ಡಿಸೆಂಬರ್ 18ರಂದು ಚುನಾವಣೆ ನಡೆದಿತ್ತು ಎಂಬುದಾಗಿ ಅವರು ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ನಕ್ಸಲರು ಸ್ಫೋಟಿಸಿತ್ತಿರುವ ನಾಲ್ಕನೇ ಶಾಲೆ ಇದಾಗಿದೆ.