ಮುಂಬೈನಲ್ಲಿ ನಡೆದ 26/11 ಭಯೋತ್ಪಾದನೆ ದಾಳಿಯಲ್ಲಿ ಗರಿಷ್ಠ ಹಾನಿ ಉಂಟುಮಾಡುವುದಕ್ಕಾಗಿ ಪ್ರತಿಯೊಂದು ಗುರಿಯನ್ನು ಭಯೋತ್ಪಾದಕರು ಎಚ್ಚರಿಕೆಯಿಂದ ಆಯ್ದುಕೊಂಡರೆಂದು ಗೃಹಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.
ಎರಡು ಬೃಹತ್ ಕಟ್ಟಡಗಳು ಸೇರಿದಂತೆ ಶತ್ರುಗಳು ಗುರಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದರು. ಒಂದು ವರ್ಷದ ಹಿಂದೆ ಜಾತ್ಯತೀತ, ವೈವಿಧ್ಯದ, ಸಹನಶೀಲ ಮತ್ತು ಪ್ರಜಾಪ್ರಭುತ್ವ ಉದ್ದೇಶದ ಭಾರತದ ಮೇಲೆ ದಾಳಿ ಮಾಡಲಾಯಿತು ಎಂದು ಚಿದಂಬರಂ ಭಯೋತ್ಪಾದಕ ದಾಳಿ ನಡೆದ ವಾರ್ಷಿಕದಂದು ದಾಳಿಯಲ್ಲಿ ಮೃತರಾದ ಪೊಲೀಸರು ಸೇರಿದಂತೆ 18 ಭದ್ರತಾ ಸಿಬ್ಬಂದಿಗೆ ಸ್ಮಾರಕ ಅನಾವರಣ ಮಾಡುತ್ತಾ ತಿಳಿಸಿದರು.
ಪೊಲೀಸ್ ಪಡೆ ಏಕಾಂಗಿ ಶಕ್ತಿಯಾಗಿ ಎದ್ದುನಿಂತು ರಾಷ್ಟ್ರದ ಸಮಗ್ರತೆಯನ್ನು ರಕ್ಷಣೆಯನ್ನು ಮಾಡಿತು ಎಂದು ಬಣ್ಣಿಸಿದ ಅವರು, ಭಾರತದ ಭದ್ರತಾಪಡೆಯನ್ನು ಗೌರವದಿಂದ ಕಾಣುವಂತೆ ಎಲ್ಲರನ್ನೂ ಮನವಿ ಮಾಡುವುದಾಗಿ ತಿಳಿಸಿದರು.