ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತವು ಕೈದಿಗಳ ಸಂಖ್ಯೆಯಲ್ಲಿ ಐದನೇ ಸ್ಥಾನದಲ್ಲಿದೆ. ಲಂಡನ್‌ನ ಕಿಂಗ್ಸ್ ಕಾಲೇಜ್, 218 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಈ ವಿಚಾರ ಹೊರಬಿದ್ದಿದೆ.
ಕೈದಿಗಳ ಸಂಖ್ಯೆಯ ವಿಚಾರದಲ್ಲಿ ಅಮೆರಿಕ ಮುಂದಿದೆ. ಇಲ್ಲಿರುವ ಕೈದಿಗಳ ಸಂಖ್ಯೆ23.1 ಲಕ್ಷ. ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿರುವ ಚೀನಾ ದ್ವಿತೀಯ ಸ್ಥಾನದಲ್ಲಿದೆ. ಇಲ್ಲಿರುವ ಕೈದಿಗಳ ಸಂಖ್ಯೆ 15.7 ಲಕ್ಷ. ತೃತೀಯ ಸ್ಥಾನದಲ್ಲಿ ರಷ್ಯಾ (8.9 ಲಕ್ಷ) ಇದ್ದರೆ, ಬ್ರೆಜಿಲ್ (4.7 ಲಕ್ಷ) ನಾಲ್ಕನೆ ಸ್ಥಾನದಲ್ಲಿದೆ.
ವಿವಿಧ ದೇಶಗಳ ಜೈಲುಗಳಲ್ಲಿ ಒಟ್ಟು 98 ಲಕ್ಷ ಕೈದಿಗಳಾಗಿದ್ದಾರೆ. ಭಾರತದಲ್ಲಿ 1,336 ಜೈಲುಗಳಲ್ಲಿ 3.73 ಲಕ್ಷ ಕೈದಿಗಳಿದ್ದಾರೆ. ಕಳೆದ ಒಂದು ದಶಕದಲ್ಲಿ ಎಲ್ಲಾ ರಾಷ್ಟ್ರಗಳಲ್ಲೂ ಕೈದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಭಾರತದಲ್ಲಿ ಈ ಅವಧಿಯಲ್ಲಿ ಕೈದಿಗಳ ಸಂಖ್ಯೆ ಒಂದು ಲಕ್ಷ ಹೆಚ್ಚಾಗಿದೆ.