ಆಂಧ್ರಪ್ರದೇಶದ ಉಗ್ರ ವಿರೋಧಿ ದಳವಾಗಿರುವ ಅಕ್ಟೋಪಸ್ ಕಮಾಂಡೋದಳವು ಇಲ್ಲಿನ ಖಾಸಗಿ ಹೋಟೇಲೊಂದರಿಂದ ನಾಲ್ವರು ಶಂಕಿತ ಐಎಸ್ಐ ಏಜೆಂಟ್‌ಗಳನ್ನು ಬಂಧಿಸಿದೆ. ತಿರುಮಲದ ಹೊರವಲಯದಲ್ಲಿರುವ ಮಂಗಳಂ ರಸ್ತೆಯಲ್ಲಿ ಇದ್ದ ಹೋಟೇಲಲ್ಲಿ ಇವರು ತಂಗಿದ್ದರು.
ಬಂಧಿತರನ್ನು ಉನ್ನತಾಧಿಕಾರದ ಸೂಚನೆ ಮೇರೆಗೆ ಹೆಚ್ಚುವರಿ ತನಿಖೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಗಿದೆ.
ಆಕ್ಟೋಪಸ್‌ನ ಮೊದಲ ಕಮಾಂಡೋ ಘಟಕವನ್ನು ಮಾಜಿ ಡಿಜಿಪಿ ಎಸ್ಎಸ್‌ಪಿ ಯಾದವ್ ಅವರು ತಿರುಮಲಾದಲ್ಲಿ ನಿಯೋಜಿಸಿದ್ದಾರೆ. ಪ್ರತಿನಿತ್ಯ ದೇಶವಿದೇಶಗಳಿಂದ ಸುಮಾರು 65,000 ಯಾತ್ರಿಕರು ಭೇಟಿನೀಡುವ ಹಿಂದುಗಳ ಪವಿತ್ರ ಯಾತ್ರಾಸ್ಥಳದ ಮೇಲೆ ಉಗ್ರರ ಭೀತಿ ಇರುವ ಕಾರಣ ಈ ದಳವನ್ನು ನಿಯೋಜಿಸಲಾಗಿದೆ.