ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮೆರಿಕಾ-ಭಾರತ ಜಾಗತಿಕ ಪಾಲುದಾರಿಕೆಯಲ್ಲಿ ಹೊಸಶಕೆ (Manmohan singh | America | India)
Bookmark and Share Feedback Print
 
"ಪರಸ್ಪರರ ಹಿತಾಸಕ್ತಿ, ಸಮಾನ ಮೌಲ್ಯಗಳು ಹಾಗೂ ಬೆಚ್ಚಗಿನ ಗೆಳೆತನದ ತಳಹದಿಯ ಮೇಲೆ ರೂಪುಗೊಂಡ ಜಾಗತಿಕ ಹೊಸ ಪಾಲುದಾರಿಕೆಯನ್ನು ಅಮೆರಿಕಾ ಮತ್ತು ಭಾರತ ಇಂದು ಅನಾವರಣಗೊಳಿಸಿವೆ. ನಮ್ಮೆರಡೂ ಮಹಾನ್ ರಾಷ್ಟ್ರಗಳು ಜೊತೆಯಾಗಿ 21ನೇ ಶತಮಾನವನ್ನು ರೂಪಿಸುವುದರ ಜೊತೆಗೆ, ಜಗತ್ತನ್ನು ಕಾಡುತ್ತಿರುವ ಎಲ್ಲ ಜಾಗತಿಕ ಸವಾಲುಗಳನ್ನು ಎದುರಿಸಲಿವೆ" ಎಂಬುದಾಗಿ ಅಮೆರಿಕಾ ರಾಯಭಾರಿ ತಿಮೋತಿ ಜೆ.ರೋಮರ್ ಅವರು ಹೇಳಿದ್ದಾರೆ.

"ನಮ್ಮ ನಾಗರಿಕರನ್ನು ಉಗ್ರವಾದದಿಂದ ರಕ್ಷಿಸಲು, ಎರಡೂ ದೇಶಗಳ ನಾಗರಿಕರ ನಡುವೆ ವ್ಯಾಪಾರ-ವಾಣಿಜ್ಯ ಅವಕಾಶಗಳನ್ನು ಸೃಷ್ಟಿಸಲು, ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವಂತೆ ಮುಂದಿನ ತಲೆಮಾರಿಗೆ ಶಿಕ್ಷಣ ಒದಗಿಸುವುದು ಮತ್ತು ಪರಿಸರ ಸ್ನೇಹಿ, ಸುಸ್ಥಿರ ಹಾಗೂ ಆರ್ಥಿಕವಾಗಿ ಸದೃಢವಾದ ಹೊಸ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬಂಡವಾಳ ಹೂಡುವಂಥ -ಹಲವಾರು ಕ್ಷೇತ್ರಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡಲು ಪಣ ತೊಟ್ಟಿದ್ದೇವೆ. ಗಮನಾರ್ಹ ಪ್ರಗತಿ ಹಾಗೂ ಮಾನವ ಪ್ರಯತ್ನದ ಎಲ್ಲ ಕ್ಷೇತ್ರಗಳಲ್ಲೂ -ಉಗ್ರರ ನಿಗ್ರಹದಿಂದ ಹವಾಮಾನ ವೈಪರಿತ್ಯ, ಮಹಿಳೆಯರನ್ನು ಸಬಲಗೊಳಿಸಲು ಶಿಕ್ಷಣ, ವಿಜ್ಞಾನ, ರಕ್ಷಣಾ ಕ್ಷೇತ್ರ -ಭಾರೀ ಪ್ರಮಾಣದ ಸಹಭಾಗಿತ್ವಕ್ಕೆ ಪ್ರಧಾನಿಗಳ ಈ ಭೇಟಿ ಒತ್ತು ನೀಡಿದೆ” ಎಂದು ಪ್ರಧಾನ ಮಂತ್ರಿಗಳ ಭೇಟಿಗಾಗಿ ಸದ್ಯ ವಾಷಿಂಗ್ಟನ್ನಲ್ಲಿರುವ ರೋಮರ್ ಹೇಳಿದ್ದಾರೆ.

ಅಮೆರಿಕಾ ಮತ್ತು ಭಾರತ ದೇಶಗಳು ಹಲವಾರು ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ವ್ಯೂಹಾತ್ಮಕ ಸಹಕಾರ ಪಡೆಯುವ ನಿಟ್ಟಿನಲ್ಲಿ ಈ ಭೇಟಿಯ ಸಂದರ್ಭದಲ್ಲಿ ಮುಂದಡಿಯಿಟ್ಟವು. ಉಗ್ರವಾದದ ನಿಗ್ರಹ ಸಹಕಾರ ಕಾರ್ಯಯೋಜನೆಯು, ನಮ್ಮ ನಾಗರಿಕರನ್ನು ಅವರ ನೆಲೆ, ಶಾಲೆ, ಪೂಜಾ ಸ್ಥಳಗಳಲ್ಲಿಯೂ ಭಯಭೀತರನ್ನಾಗಿಸುವ ಜಾಗತಿಕ ಉಗ್ರವಾದದಿಂದ ರಕ್ಷಿಸಲು -ಈಗಾಗಲೇ ಈ ದಿಶೆಯ ಸಹಕಾರ ಅಭೂತಪೂರ್ವ ಮಟ್ಟದಲ್ಲಿರುವ, ನಮ್ಮ ಸಂಯೋಜಿತ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಸ್ವತಂತ್ರ ಹಾಗೂ ಸ್ಥಿರ ಅಫ್ಘಾನಿಸ್ಥಾನವನ್ನು ನಿರ್ಮಿಸಲು ಹೆಚ್ಚಿನ ಪ್ರಯತ್ನ ಮಾಡಲು ನಮ್ಮ ನಾಯಕರು ಒಪ್ಪಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ, ಜನೋಪಕಾರಿ, ಮತ್ತು ಕಡಲ ರಕ್ಷಣೆ (ವಿನಿಮಯ, ಕಸರತ್ತು ಹಾಗೂ ರಕ್ಷಣಾ ಉಪಕರಣಗಳ ಮಾರಾಟಗಳ ಮೂಲಕ) ಮುಂತಾದ ಕ್ಷೇತ್ರಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಇಬ್ಬರೂ ನಾಯಕರು ಬದ್ಧತೆ ಪ್ರದರ್ಶಿಸಿದರು. ಅಲ್ಲದೇ, ಅಣ್ವಸ್ತ್ರ ಪ್ರಸರಣ ನಿಷೇಧದ ವಿಷಯದಲ್ಲಿಯೂ ಜತೆಗೂಡಿ ದುಡಿಯುವ ಪಣವನ್ನು ತೊಡಲಾಯಿತು. ಅಲ್ಲದೇ, ವಿಶ್ವವನ್ನು ಅಣ್ವಸ್ತ್ರಗಳಿಂದ ಮುಕ್ತಗೊಳಿಸುವ ಜಂಟಿ-ಕನಸನ್ನು ನನಸು ಮಾಡಲು ಇಬ್ಬರೂ ನಾಯಕರು ಶ್ರಮಿಸುವುದಾಗಿ ತಿಳಿಸಿದರು.

ಶುದ್ಧ ಶಕ್ತಿ, ಶಕ್ತಿ ಭದ್ರತೆ ಹಾಗೂ ಹವಾಮಾನ ವೈಪರಿತ್ಯ ಕ್ಷೇತ್ರಗಳಲ್ಲಿ ಸಹಕಾರ ಪ್ರಮಾಣವನ್ನು ಹೆಚ್ಚಿಸಲು ಎರಡೂ ರಾಷ್ಟ್ರಗಳು ಸ್ವಚ್ಛ ಶಕ್ತಿ ಹಾಗೂ ಹವಾಮಾನ ವೈಪರಿತ್ಯ ಕಾರ್ಯಯೋಜನೆಯನ್ನು ಆರಂಭಿಸಿವೆ. ಈ ದಿಟ್ಟ ಕಾರ್ಯಯೋಜನೆಯು ಎಲ್ಲ ಭಾರತೀಯರಿಗೆ ಶುದ್ಧ ಹಾಗೂ ಅಗ್ಗದ ಶಕ್ತಿ ನೀಡುವುದರ ಜೊತೆಗೆ ಎರಡೂ ದೇಶದ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತದೆ. ಹವಾಮಾನ ವೈಪರಿತ್ಯದ ಕುರಿತು ವಿಶ್ವಸಂಸ್ಥೆ ರೂಪುರೇಷೆ ಸಮಾವೇಶದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಮ್ಮೆರಡೂ ದೇಶಗಳು ಮಹತ್ವದ ಪಾತ್ರ ವಹಿಸಬೇಕಿರುವ ಅಗತ್ಯವನ್ನು ಇಬ್ಬರೂ ನಾಯಕರು ಗುರುತಿಸಿದರು.

ಪೋಲಿಯೋ ಪೀಡೆಯನ್ನು ಕಡಿಮೆಗೊಳಿಸುವ ಹಾಗೂ ವಿಶ್ವವನ್ನು ಕಾಡುವ ಭಯಾನಕ ರೋಗಗಳ ವಿರುದ್ಧ ಹೋರಾಡಲು ಎರಡೂ ರಾಷ್ಟ್ರ ಬದ್ಧ ಎಂಬುದನ್ನು ಅಧ್ಯಕ್ಷ ಒಬಾಮ ಮತ್ತು ಪ್ರಧಾನಿ ಸಿಂಗ್ ಅವರು ಮರುಪುಷ್ಟೀಕರಿಸಿದರು. ಸರ್ವವ್ಯಾಪಿ ವ್ಯಾಧಿಗಳ ವಿರುದ್ಧ ಸೂಕ್ತ ಪ್ರತಿಕ್ರಿಯೆ ನೀಡಲು ಹಾಗೂ ವಿಶ್ವ ಸ್ವಾಸ್ತ್ಯ ಕ್ಷೇತ್ರದ ಹೊಸ ಬೆದರಿಕೆಗಳನ್ನು ಪತ್ತೆ ಹಚ್ಚಲು ಜಂಟಿ ರೋಗ ಪತ್ತೆ ವಿಶ್ವ ಯೋಜನೆ ಎಂಬ ಜಂಟಿ ಕಾರ್ಯಕ್ರಮವನ್ನು ಭೇಟಿಯ ವೇಳೆ ಹಮ್ಮಿಕೊಳ್ಳಲಾಗಿದೆ.

ವಿಶ್ವವಿದ್ಯಾಲಯಗಳ ನಡುವಿನ ವಿನಿಮಯ ಹೆಚ್ಚಳ, ಕೆಳಹಂತದ ಸಿಬ್ಬಂದಿಯ ಅಭಿವೃದ್ಧಿ ಮತ್ತು ದುರ್ಬಲರಿಗೆ ಶಿಕ್ಷಣಾವಕಾಶಗಳನ್ನು ಕಲ್ಪಿಸುವ ಯೋಜನೆಗಳ ಮೂಲಕ, ಭಾರತ ಮತ್ತು ಅಮೆರಿಕಾ ವಿಶ್ವವಿದ್ಯಾಲಯಗಳ ನಡುವಿನ ಸಂಪರ್ಕ ಕೊಂಡಿಗಳನ್ನು ಬಲ ಪಡಿಸಲು ಒಬಾಮ-ಸಿಂಗ್ 21ನೇ ಶತಮಾನದ ಜ್ಞಾನ ಕಾರ್ಯಯೋಜನೆ ನೆರವಾಗಲಿದೆ.

ಭಾರತ ಹಾಗೂ ಅಮೆರಿಕಾಗಳಲ್ಲಿ ಉದ್ಯೋಗ ಸೃಷ್ಟಿಸುವ ಸಲುವಾಗಿ, ವಾಣಿಜ್ಯ ಹಾಗೂ ಬಂಡವಾಳ ದ್ವಿ ಮುಖವಾಗಿ ಪ್ರವಹಿಸುವಂತೆ ಮಾಡುವ ಕುರಿತು ಕಾರ್ಯಯೋಜನೆಯನ್ನು ರೂಪಿಸಲು ಯು.ಸ್.-ಇಂಡಿಯಾ ಸಿಇಒ ಫೋರಂನಡಿಯಲ್ಲಿ ಖಾಸಗಿ ಉದ್ದಿಮೆ ವಲಯದ ನೇತಾರರ ಒಂದಾಗಿ ಚರ್ಚಿಸಿದರು.

“ಪ್ರಧಾನಿ ಸಿಂಗ್ ಅವರ ಭೇಟಿಯು ಬಲಯುತ ಹಾಗೂ ಭರವಸೆದಾಯಕ ಸಹಭಾಗಿತ್ವವನ್ನು ಮರುಪುಷ್ಟೀಕರಿಸಿದೆ. ಈ ಪಾಲುದಾರಿಕೆ ಸ್ಥಳೀಯವಾಗಿ ನಮಗೇ ಸೀಮಿತವಾಗಿದ್ದರೂ, ಪರಂಪರೆ ಮತ್ತು ಪರಿಣಾಮಗಳ ದೃಷ್ಟಿಯಿಂದ ಅದು ವಿಶ್ವವ್ಯಾಪಿ. ಉಜ್ವಲ ಭವಿಷ್ಯವನ್ನು ಹೊಂದಿರುವ ಅಮೆರಿಕಾ -ಭಾರತಗಳ ಪಾಲುದಾರಿಕೆ, ಈ ಭೇಟಿಯ ಮೂಲಕ ಹೊಸ ಶಕೆ ಆರಂಭವಾಗಿದೆ” ಎಂದು ರಾಯಭಾರಿ ರೋಮರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮನಮೋಹನ್ ಸಿಂಗ್, ಅಮೆರಿಕ, ಭಾರತ