ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನ-ಪಾಕ್ ಸೇನಾ ಬಾಂಧವ್ಯಕ್ಕೆ ಆಂಟನಿ ಕಳವಳ (China | Pakistan | IDSA | AK Antony)
Bookmark and Share Feedback Print
 
"ತನ್ನ ನೆಲದಿಂದ ಕಾರ್ಯಾಚರಣೆ ನಡೆಸುತ್ತಿರುವ ಉಗ್ರರ ಗುಂಪುಗಳನ್ನು ಹತ್ತಿಕ್ಕದ ಪಾಕಿಸ್ತಾನ ಆ ಗುಂಪುಗಳು ಮತ್ತಷ್ಟು ಶಕ್ತಿಯುತವಾಗಿ ಬೆಳೆಯಲು ಅವಕಾಶ ನೀಡುತ್ತಿದೆ" ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಆರೋಪಿಸಿದ್ದಾರೆ. ಇಲ್ಲಿ ಶುಕ್ರವಾರ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆಯ (ಐಡಿಎಸ್‌ಎ) ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಚೀನ-ಪಾಕಿಸ್ತಾನ ನಡುವಿನ ಸೇನಾ ಬಾಂಧವ್ಯ ಗಂಭೀರ ವಿಚಾರವಾಗಿದೆ ಎಂದು ನುಡಿದರು.

"ಚೀನ-ಪಾಕಿಸ್ತಾನ ನಡುವಿನ ಸೇನಾ ಸಹಕಾರ ಭಾರಿ ಕಳವಳದ ಸಂಗತಿ. ಚೀನಾದ ಸೇನಾ ಸಾಮರ್ಥ್ಯವನ್ನು ನಾವು ನಿರಂತರವಾಗಿ ಗಮನಿಸುತ್ತ ಇರಬೇಕು ಮತ್ತು ಅದಕ್ಕೆ ತಕ್ಕಂತೆ ನಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜತೆಗೆ ನಾವು ಸದಾ ಕಾಲ ಎಚ್ಚರದಿಂದ ಇರಬೇಕು" ಎಂದು ಆಂಟನಿ ಹೇಳಿದರು.

ಪಾಕಿಸ್ತಾನದಲ್ಲಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯ ಇದೆ, ಪಾಕ್ ನೆಲದಲ್ಲಿ ಬೇರು ಬಿಟ್ಟು ಕಾರ್ಯಾಚರಣೆ ನಡೆಸುತ್ತಿರುವ ಉಗ್ರರ ಗುಂಪುಗಳನ್ನು ನಿಗ್ರಹಿಸಲೇಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರಿಗೆ ಸಿಗುತ್ತಿರುವ ನೆರವು ಈ ಮೊದಲಿನಂತೆಯೇ ಮುಂದುವರಿದಿದ್ದು, ಉಗ್ರರ ಗುಂಪುಗಳು ಹುಲುಸಾಗಿ ಬೆಳೆಯುತ್ತಿವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ