ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರಿಂದ ವಾರ್ಷಿಕ 2000 ಕೋಟಿ ಹಫ್ತಾ ವಸೂಲಿ (Maoists | extort | Rs.2,000 cr | India)
Bookmark and Share Feedback Print
 
ಮಾವೋವಾದಿಗಳು ವಾರ್ಷಿಕ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಕೊಳ್ಳೆಹೊಡೆಯುತ್ತಾರೆ ಎಂಬುದಾಗಿ ಛತ್ತೀಸ್‌ಗಢದ ಡಿಜಿಪಿ ವಿಶ್ವ ರಂಜನ್ ಹೇಳಿದ್ದಾರೆ. ನಕ್ಸಲರು ತಮ್ಮ ಲೂಟಿಗಾಗಿ ಹೆಚ್ಚಾಗಿ ಗಣಿಗಾರಿಕಾ ಕಂಪೆನಿಗಳು, ಮೂಲಸೌಕರ್ಯ ಯೋಜನೆಯ ಗುತ್ತಿಗೆದಾರರು ಮತ್ತು 'ತೆಂಡು ಪಟ್ಟ' ಉದ್ಯಮಿಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ನಕ್ಸಲರು ವಾರ್ಷಿಕವಾಗಿ 2 ಸಾವಿರ ಕೋಟಿ ರೂಪಾಯಿಗಳನ್ನು ಲೂಟುತ್ತಿದ್ದು, ಇದರಲ್ಲಿ ಹೆಚ್ಚಿನಪಾಲು ಜಾರ್ಖಂಡ್‌ನದ್ದು ಎಂಬುದಾಗಿ ಗುಪ್ತಚರ ದಳದ ಮಾಜಿ ಹೆಚ್ಚುವರಿ ನಿರ್ದೇಶಕರೂ ಆಗಿರುವ ರಂಜನ್ ಅವರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇದು ಇತ್ತೀಚೆಗೆ ಮಾವೋವಾದಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ದಾಖಲೆ ಪುಸ್ತಕಗಳು ಮತ್ತು ಇತರ ದಾಖಲೆಗಳಿಂದ ಅಂದಾಜಿಸಿರುವ ಮೊತ್ತವಾಗಿದೆ ಎಂದು ಅವರು ಹೇಳಿದ್ದಾರೆ.

ತೆಂಡುಪಟ್ಟ ಅಂದರೆ ಇದು ಬೀಡಿ ಕಟ್ಟಲು ಬಳಸುವ ಎಲೆ. ಛತ್ತೀಸ್‌ಗಢಲ್ಲಿ ಇದು ಮಿಲಿಯಗಟ್ಟಲೆ ರೂಪಾಯಿಯ ವ್ಯವಹಾರವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ