ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಇವಿಕೆಎಸ್ ಇಳಂಗೋವನ್ ಅವರ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದಾರೆ ಎಂದು ಪೊಲೀಸರು ಶನಿವಾರ ಇಲ್ಲಿ ಹೇಳಿದರು.
ಅಡೆಯಾರ್ನಲ್ಲಿರುವ ಇಳಂಗೋವನ್ ಅವರ ನಿವಾಸದ ಮೇಲೆ ಕಳೆದ ರಾತ್ರಿ ತಡವಾಗಿ ಮೂರು ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ. ಇತ್ತೀಚೆಗೆ ಹತನಾಗಿರುವ ಎಲ್ಟಿಟಿಇ ನಾಯಕ ವಿ. ಪ್ರಭಾಕರನ್ನ ಪೋಸ್ಟರುಗಳನ್ನು ಈರೋಡಿನಲ್ಲಿ ಶುಕ್ರವಾರ ಹರಿದು ಹಾಕಲಾಗಿದ್ದು, ಇದಾಗಿ ಕೆಲವು ಗಂಟೆಗಳ ಬಳಿಕ ಈ ಘಟನೆ ಸಂಭವಿಸಿದೆ.
ಇಳಂಗೋವನ್ ಮನೆಮೇಲೆ ದಾಳಿ ನಡೆದ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ದಾಳಿಯಿಂದಾಗಿ ಕೆಲವು ಪೀಠೋಪಕರಣಗಳು ಹಾನಿಗೊಂಡವು ಎಂದು ಪೊಲೀಸರು ನುಡಿದರು.