ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಮಸೀದಿ ಧ್ವಂಸ ನನಗೆ ಶ್ರೇಷ್ಠ ದಿನ: ಕಲ್ಯಾಣ್ ಸಿಂಗ್ (Kalyan Singh | Babri Masjid | Liberhan Commission | Atal Bihari Vajpayee)
Bookmark and Share Feedback Print
 
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ಮಾಜಿ ಮುಖಂಡ ಕಲ್ಯಾಣ್ ಸಿಂಗ್, ಆ ದಿನ ನನ್ನ ಜೀವನದ ಅತಿ ಸಂತೋಷದ ದಿನ ಎಂದು ಬಣ್ಣಿಸಿದ್ದಾರೆ.

ಅಲ್ಲದೆ ಮಸೀದಿ ಧ್ವಂಸ ಪ್ರಕರಣದಲ್ಲಿ ವಾಜಪೇಯಿಯವರ ಕೈವಾಡವಿದೆ ಎಂದು ಹೇಳಿದ್ದ ಪಾರ್ಲಿಮೆಂಟ್‌ನಲ್ಲಿ ಮಂಡಿಸಲಾದ ಲಿಬರ್ಹಾನ್ ಆಯೋಗದ ವರದಿಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್, 6, 1992 ನನ್ನ ಜೀವನದ ಅತಿ ಸಂತೋಷದ ದಿನ. ಇದು ಇಡೀ ರಾಷ್ಟ್ರಕ್ಕೂ ಶ್ರೇಷ್ಠ ದಿನವಾಗಿದೆ. ಬಾಬ್ರಿ ಮಸೀದಿ ಧ್ವಂಸಗೊಂಡಿರುವುದಕ್ಕೆ ನನ್ನಲ್ಲಿ ವಿಷಾದ, ಪಶ್ಚಾತಾಪ ಅಥವಾ ದುಃಖವಿಲ್ಲ ಎಂದು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕಲ್ಯಾಣ್ ಸಿಂಗ್ ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.

ನಿರ್ಣಾಯಕ ದಿನದ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ಅವರು, 'ನನ್ನ ಸಾಂವಿಧಾನಿಕ ಜವಾಬ್ದಾರಿಗಳನ್ನು ನಾನು ಮಾಡಿದ್ದೇನೆ. ಆದರೆ ಸಾವಿರಾರು ಕರ ಸೇವಕರು ಕೃತ್ಯದಲ್ಲಿ ನಿರತರಾಗಿದ್ದಾಗ ಅವರ ವಿರುದ್ಧ ಗುಂಡು ಹಾರಿಸದಂತೆ ನಾನು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದಕ್ಕಾಗಿ ನಾನು ಪೊಲೀಸರನ್ನು ದೂಷಿಸಲು ಸಿದ್ಧನಿಲ್ಲ. ಅವರು ಅವರ ಕೆಲಸವನ್ನು ಮಾಡಿದ್ದಾರೆ. ಪೊಲೀಸರು ನನ್ನ ಆದೇಶಗಳನ್ನು ಪಾಲಿಸಿದ್ದಾರೆ, ಅಷ್ಟೇ..' ಎಂದರು.

ವಾಜಪೇಯಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ನ್ಯಾಯಮೂರ್ತಿ ಲಿಬರ್ಹಾನ್ ಆಯೋಗವನ್ನು ತೀವ್ರವಾಗಿ ಟೀಕಿಸಿದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, 'ಘಟನೆ ನಡೆದು 17 ವರ್ಷಗಳ ನಂತರ ಬಂದಿರುವ ವರದಿಯೇ ಸುಳ್ಳು. ಅಟಲ್‌ಜೀಯವರನ್ನು ದೂಷಿಸುವುದು ತಪ್ಪು. ಅವರು ಇಡೀ ಪ್ರಕರಣದಲ್ಲಿ ಅವರ ಪಾತ್ರ ಲವಲೇಶವೂ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆ' ಎಂದು ಕಿಡಿ ಕಾರಿದ್ದಾರೆ.

ಬಾಬ್ರಿ ಮಸೀದಿ ಧ್ವಂಸದ ರೂವಾರಿ ಎಂದು ಲಿಬರ್ಹಾನ್ ಆಯೋಗದಿಂದ ಆರೋಪಕ್ಕೊಳಗಾಗಿರುವ ಉರಿ ನಾಲಗೆ ಖ್ಯಾತಿಯ ಸಿಂಗ್ ತನ್ನ ಹೇಳಿಕೆಯನ್ನು ಪುನರುಚ್ಛರಿಸುತ್ತಾ, 'ರಾಜ ಜನ್ಮ ಭೂಮಿ ವಿಚಾರ ಜೀವಂತವಾಗಿದ್ದು, ಅದೇ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸಿದ ನಂತರವಷ್ಟೇ ಅದು ಸತ್ವ ಕಳೆದುಕೊಳ್ಳಲಿದೆ' ಎಂದರು.

ಸಮಾಜವಾದಿ ಪಕ್ಷದ ಜತೆಗಿನ ಸಖ್ಯದ ಕುರಿತು ಪ್ರಶ್ನಿಸಿದಾಗ ಅವರು, ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ; ಆದರೆ ರಾಜಕೀಯದಲ್ಲಿ ಪ್ರಾಮಾಣಿಕತೆಯಿಂದಲೇ ಇದ್ದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ