ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೈಗಾ ಘಟನೆ ಗಂಭಿರ, ತನಿಖೆ ನಡೆಯುತ್ತಿದೆ: ಚೌವಾಣ್ (Kaiga | Nuclear | Prithviraj Chavan | inquiry)
Bookmark and Share Feedback Print
 
ಕೈಗಾ ಅಣುಸ್ಥಾವರದಲ್ಲಿ ಕುಡಿಯವ ನೀರಿನ ವಾಟರ್ ಕೂಲರ್‌ಗೆ ಭಾರಜಲ ಮಿಶ್ರಮಾಡಿರುವ ಘಟನೆಯನ್ನು ಗಂಭಿರವಾಗಿ ಪರಿಗಣಿಸಿರುವ ಸರ್ಕಾರವು ಈ ದುಷ್ಕೃತ್ಯದ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ನೀಡಿದ್ದು, ಸತ್ಯವು ಸದ್ಯವೇ ಹೊರಬೀಳಲಿದೆ ಎಂದು ಹೇಳಿದೆ.

"ವಿಶ್ವಾಸ ದ್ರೋಹಿ ನೌಕರನೊಬ್ಬ ಭಾರಜಲವನ್ನು ಕುಡಿಯುವ ನೀರಿನ ವಾಟರ್ ಕೂಲರ್‌ಗೆ ಮಿಶ್ರಮಾಡಿದ್ದು, ಇದರಿಂದ ನೀರು ಕುಡಿದಿದ್ದ ನೌಕರರು ಅಸ್ವಸ್ಥಗೊಂಡಿದ್ದರು. ಈ ಕುರಿತು ತನಿಖೆ ನಡೆಯುತ್ತಿದ್ದು, ಇದೊಂದು ಕೇಡಿನ ಕೃತ್ಯ" ಎಂಬುದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಪೃಥ್ವಿರಾಜ್ ಚೌವಾಣ್ ಹೇಳಿದ್ದಾರೆ.

ಯಾವುದೇ ಹತಾಶ ವ್ಯಕ್ತಿಯ ಕೃತ್ಯ ಇದಾಗಿದ್ದರೂ ಸಹ ಈ ಕುರಿತು ಸತ್ಯಾಂಶವನ್ನು ಪತ್ತೆ ಮಾಡಲಾಗುವುದು ಮತ್ತು ತನಿಖೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

"ನೀರು ಕಲುಷಿತಗೊಂಡಿರುವುದು ಅಷ್ಟೊಂದು ಗಂಭೀರವಲ್ಲ ಮತ್ತು ಇದನ್ನು ಒಂದೆರಡು ದಿವಸಗಳಲ್ಲಿ ಶುದ್ಧಗೊಳಿಸಲಾಗುವುದು" ಎಂಬುದಾಗಿ ಹೇಳಿರುವ ಅವರು, "ಆದರೆ ಈ ನಡೆದಿರುವ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಇಲ್ಲಿನ ಉದ್ಯೋಗಿಗಳ ಸುರಕ್ಷತೆಯ ಬಗ್ಗೆ ಕವಳಗೊಂಡಿದ್ದೇವೆ" ಎಂದು ಹೇಳಿದ್ದಾರೆ
ಸಂಬಂಧಿತ ಮಾಹಿತಿ ಹುಡುಕಿ