ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ಕಸಬ್ ಪರ ನೇಮಕವಾಗಿದ್ದ ವಕೀಲ ಖಾಜ್ಮಿ ವಜಾ (Mumbai Terror | Abbas Kazmi | Mumbai)
Bookmark and Share Feedback Print
 
PTI
26/11ರ ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಉಗ್ರ ಕಸಬ್‌ನನ್ನು ಪ್ರತಿನಿಧಿಸುತ್ತಿದ್ದ ವಕೀಲ ಎಸ್‌ಜಿ ಅಬ್ಬಾಸ್ ಖಾಜ್ಮಿಯನ್ನು ಸೋಮವಾರ ವಜಾಗೊಳಿಸಿದೆ. ಖಾಜ್ಮಿಯ 'ಅಸಹಕಾರಕ್ಕಾಗಿ' ಅವರನ್ನು ವಿಶೇಷ ನ್ಯಾಯಾಧೀಶ ಎಂಎಲ್ ತಹಲಿಯಾನ್ ಅವರು ಈ ಕ್ರಮ ಕೈಗೊಂಡಿದ್ದಾರೆ.

ಖಾಜ್ಮಿಯ ವಜಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಇದೀಗ ಮೂರು ಆಯ್ಕೆಗಳಿವೆ. ಖಾಜ್ಮಿಯ ಮರುನೇಮಕ ಮಾಡಬಹುದು ಅಥವಾ ಹೊಸ ವಕೀಲರನ್ನು ನೇಮಿಸಬಹುದು ಇಲ್ಲವೇ ಖಾಜ್ಮಿಯ ಜೂನಿಯರ್ ವಕೀಲರಾಗಿರುವ ಕೆಪಿ ಪವಾರ್ ಅವರೊಂದಿಗೆ ಪ್ರಕರಣವನ್ನು ಮುಂದುವರಿಸಬಹುದಾಗಿದೆ. ಪವಾರ್ ಅವರನ್ನೂ ಸಹ ನ್ಯಾಯಾಲಯ ನೇಮಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪೂರಕ ಸಾಕ್ಷಿಯಾಗಿ ಹಾಜರುಪಡಿಸಲಾಗಿರುವ ವಸ್ತುಗಳನ್ನು ಪರೀಕ್ಷಿಸಲು ಖಾಜ್ಮಿ ಸಮಯಾವಕಾಶ ಕೋರಿದ್ದು ನ್ಯಾಯಾಧೀಶರನ್ನು ಸಿಟ್ಟಿಗೆಬ್ಬಿಸಿತ್ತು.

ಪುರಾವೆಗಳಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅಫಿದಾವತ್‌ಗಳನ್ನು ಪರೀಕ್ಷಿಸಿ ತನ್ನ ಪ್ರತಿವಾದವನ್ನು ಸಿದ್ಧ ಪಡಿಸಲು ಸಮಯಾವಕಾಶ ಕೋರಿದ್ದು ಇಷ್ಟಕ್ಕೆ ಕಾರಣವಾಗಿತ್ತು. ಇದಲ್ಲದೆ, ಅಫಿದಾವತ್‌ಗಳನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ಸರ್ಕಾರಿ ವಕೀಲರು ಹೇಳಿರುವುದು ತನಗೆ ಗೊತ್ತೇ ಇರಲಿಲ್ಲ ಎಂಬುದಾಗಿ ಖಾಜ್ಮಿ ಹೇಳಿದ್ದು, ನವೆಂಬರ್ 26ರಂದೇ ನ್ಯಾಯಾಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು.

ಇದಾದ ಬಳಿಕ ಮರುದಿನ ಸರ್ಕಾರಿ ವಕೀಲ ಉಜ್ವಲ್ ನಿಖಂ ಜೊತೆ ಚರ್ಚಿಸಿದ ಬಳಿಕ ಖಾಜ್ಮಿ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ