ಸಂತಾನ ನಿಯಂತ್ರಣ ಹಾಗೂ ಏಡ್ಸ್ ಮುಂತಾದ ರೋಗಗಳು ಹರಡದಂತೆ ತಡೆಯುವ ಸಲುವಾಗಿ ಸರ್ಕಾರವು ಉಚಿತವಾಗಿ ಹಂಚುವ ನಿರೋಧ್ ಕಾಂಡಮ್‌ಗಳನ್ನು ಕಾನೂನು ಬಾಹಿರವಾಗಿ ಎಗರಿಸಿ ಅದನ್ನು ವಿದೇಶಿ ಬ್ರಾಂಡ್‌ಗಳೆಂದು ದೇಶಾದ್ಯಂತ ಮಾರಲ್ಪಡಲಾಗುತ್ತದೆ ಎಂಬುದಾಗಿ ವರದಿ ತಿಳಿಸಿದೆ.
ಹಿಂದೂಸ್ತಾನ್ ಲೆಟೆಕ್ಸ್ ಲಿಮಿಟೆಡ್(ಎಚ್ಎಲ್ಎಲ್) ಕಂಪೆನಿಯು ಸರ್ಕಾರಕ್ಕೆ ಈ ನಿರೋಧ್‌ಗಳನ್ನು ಪೂರೈಸುತ್ತಿದೆ. ಏಡ್ಸ್ ವಿರುದ್ಧ ಹೋರಾಟ ಹಾಗೂ ಜಸಂಖ್ಯಾ ನಿಯಂತ್ರಣ ಮುಂತಾದ ಉದ್ದೇಶಗಳಿಂದ ಇದನ್ನು ಉಚಿತವಾಗಿ ಹಂಚಲಾಗುತ್ತಿದೆ. ಆದರೆ ಖಾಸಗಿ ಲೆಟೆಕ್ಸ್ ಫ್ಯಾಕ್ಟರಿಗಳು ಇವುಗಳನ್ನು ಅತ್ಯಾಕರ್ಷಕ ಉದ್ರೇಕಕಾರಿ ಪ್ಯಾಕೇಟುಗಳಲ್ಲಿ ಇರಿಸಿ, ಬೇರೆ ಬ್ರಾಂಡುಗಳ ಮುದ್ರೆ ಒತ್ತಿ ಜೈಪುರ, ಇಂಧೋರ್, ರಾಂಚಿ ಹಾಗೂ ಇತರ ದೂರದ ಪ್ರದೇಶಗಳ ವ್ಯಾಪಾರಿಗಳಿಗೆ ಕಳುಹಿಸಲಾಗುತ್ತದೆ ಎಂಬದಾಗಿ ಪಿಟಿಐ ಬಾತ್ಮೀದಾರರು ಮಾಡಿರುವ ತನಿಖೆಯಿಂದ ತಿಳಿದು ಬಂದಿದೆ.
ದೆಹಲಿಯ ಸೋಶಿಯಲ್ ಮಾರ್ಕೆಟಿಂಗ್ ಸಂಸ್ಥೆಯೊಂದು ಇದನ್ನು ಹೇಗೆ ಮರು ಪ್ಯಾಕೇಟ್ ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ಪೊಟ್ಟಣದಲ್ಲಿರುವ ಲ್ಯೂಬ್ರಿಕೆಂಟ್ ಸಹಾಯದಿಂದಲೆ ಅದನ್ನು ಹಳೆಯ ಪ್ಯಾಕೇಟಿನಿಂದ ಹೊಸ ಪ್ಯಾಕೇಟಿಗೆ ಚಲಾಯಿಸುವಂತೆ ಮಾಡಲಾಗುತ್ತದೆ ಎಂಬುದನ್ನು ಸಂಸ್ಥೆಯ ಮುಖ್ಯಸ್ಥರು ತೋರಿಸುತ್ತಾರೆ ಎಂದು ವರದಿ ಹೇಳಿದೆ.