ಮೂರನೇ ದಿನವೂ ಧಕ್ಕೆ
ನವದೆಹಲಿ: ಮೊತ್ತ ಮೊದಲ ಬಾರಿಗೆ ಆನ್‌ಲೈನ್ ಪರೀಕ್ಷೆ ನಡೆಸಲು ಹೊರಟಿದ್ದ ಸ್ಪರ್ಧಾತ್ಮಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್)ಯು ಮೂರನೇ ದಿನವೂ ತೊಂದರೆ ಅನುಭವಿಸಿದೆ. ಕಂಪ್ಯೂಟರ್‌ಗಳು ಕ್ರಾಶ್ ಆದ ಕಾರಣ ಬೆಂಗಳೂರಿನಲ್ಲಿ ಒಂದು ಮತ್ತು ಮುಂಬೈಯ ಎರಡು ಕಾಲೇಜುಗಳಲ್ಲಿ ಸೋಮವಾರ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.