ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾರ್ಕಿಂಗ್ ಸಮಸ್ಯೆ: ಲಾರಿ ನಿಲ್ಲಿಸಲು ಗುಡ್ಡ ಕಡಿದ ಗ್ರಾಮಸ್ಥ! (Villager | Carves | Mountain | Park truck)
Bookmark and Share Feedback Print
 
ತನ್ನ ಮನೆಮುಂದಿರುವ ಕಲ್ಲುಬಂಡೆಯಾವೃತ ಗುಡ್ಡವನ್ನು ಕಳೆದ 14 ವರ್ಷಗಳಿಂದ ಕಡಿದ ವ್ಯಕ್ತಿಯೊಬ್ಬರು ಕೊನೆಗೂ ಇಲ್ಲಿ ತನ್ನ ಲಾರಿ ನಿಲ್ಲಿಸಲು ಜಾಗ ಮಾಡಿಕೊಂಡಿದ್ದಾರೆ.

"ನನ್ನ ಮನೆಯ ದಾರಿಗೆ ಗುಡ್ಡ ಅಡ್ಡವಿದ್ದ ಕಾರಣ ನಾನು ನನ್ನ ಮನೆಯ ಮುಂದೆ ಟ್ರಕ್ ನಿಲ್ಲಿಸಲಾಗುತ್ತಿರಲಿಲ್ಲ" ಎಂಬುದಾಗಿ 53ರ ಹರೆಯದ ರಾಮಚಂದ್ರ ದಾಸ್ ಹೇಳುತ್ತಾರೆ. ಅವರು ಪೂರ್ವ ಬಿಹಾರದ ಗಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ.

ಸ್ಥಳೀಯ ಪ್ರಾಧಿಕಾರವು ತನಗೆ ಸಹಾಯ ಮಾಡಲು ನಿರಾಕರಿಸಿದ ಬಳಿಕ ದಾಸ್ ತನ್ನಷ್ಟಕ್ಕೆ ಗುಡ್ಡ ಅಗೆಯಲು ಆರಂಭಿಸಿದ್ದರು. ತನ್ನ ಟ್ರಕ್ ಅನ್ನು ಕಳ್ಳರು ಕದಿಯಬಹುದೆಂಬ ಭೀತಿಯೇ ಈ ಸಾಹಸಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ನಾನು ಟ್ರಕ್ಕನ್ನು ಮೈಲಿಗಟ್ಟಲೆ ದೂರ ನಿಲ್ಲಿಸಿ ಬರಬೇಕಿತ್ತು. ಅದಕ್ಕಾಗಿ ನಾನೇ ಏನಾದರೂ ಮಾಡಬೇಕೆಂದು ಈ ಕಾರ್ಯಕ್ಕೆ ಮುಂದಾದೆ ಎಂದು ದಾಸ್ ಹೇಳುತ್ತಾರೆ.

ಇದೀಗ ಸುರಂಗ ತೋಡಿರುವ ದಾಸ್ ಮೇಲೆ ಗ್ರಾಮಸ್ಥರಿಗೂ ತುಂಬ ಮೆಚ್ಚುಗೆ. ಬಂಡೆಯಿಂದಾಗಿ ಸುತ್ತುಬಳಸಿ ತಮ್ಮ ತೋಟಕ್ಕೆ ಸಾಗುತ್ತಿದ್ದ ಸ್ಥಳೀಯರು ಇದೀಗ ಈ 14 ಅಡಿ ಸುರಂಗ ಬಳಸಿ ಸಾಗುವ ಮೂಲಕ ಹಾದಿ ಸಮೀಪವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ