ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಾದಕ್ಕೆ ಸಿದ್ಧವಾಗಿರುವ ಕಸಬ್‌ನ ಹೊಸ ಲಾಯರ್ ಪವಾರ್ (Mumbai attacks | Kasab | KP Pawar)
Bookmark and Share Feedback Print
 
ಮುಂಬೈದಾಳಿ ಪ್ರಕರಣದ ಪ್ರಮುಖ ಆರೋಪಿ ಅಜ್ಮಲ್ ಅಮೀರ್ ಕಸಬ್ ಪರ ವಕೀಲ ಅಬ್ಬಾಸ್ ಖಾಜ್ಮಿ ವಜಾಗೊಂಡಿರುವ ಬಳಿಕ ಇದೀಗ ಅವರ ಸಹಾಯಕರಾಗಿದ್ದ ಕೆಪಿ ಪವಾರ್ ಅವರನ್ನು 26/11 ಪ್ರಕರಣದ ಪ್ರಮುಖ ವಕೀಲರನ್ನಾಗಿಸಲಾಗಿದ್ದು, ಅವರು ಪ್ರಕರಣವನ್ನು ಮುನ್ನಡೆಸಲು ಸಂಪೂರ್ಣ ಸನ್ನದ್ಧರಾಗಿದ್ದಾರೆ.

"ತನಗೆ ವಹಿಸಲಾಗಿರುವ ಜವಾಬ್ದಾರಿಯನ್ನು ತಾನು ಉತ್ಸಾಹದಿಂದ ನಿರ್ವಹಿಸುವೆ. ಕಸಬ್‌ನ ವಕೀಲನನ್ನಾಗಿ ನೇಮಿಸುವ ಮೂಲಕ ನ್ಯಾಯಾಲಯವು ತನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ತಾನು ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವೆ" ಎಂಬುದಾಗಿ 55ರ ಹರೆಯದ ವಕೀಲ ಪವಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಸಬ್‌ನನ್ನು ಸಮರ್ಥಿಸಿಕೊಳ್ಳಲು ನಿಮ್ಮ ವ್ಯೂಹಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಾನೀಗ ಪ್ರಕರಣದ ಕುರಿತು ತಯಾರಿ ನಡೆಸುತ್ತಿರುವ ಕಾರಣ ಈ ವಿಚಾರವನ್ನು ಹೊರಗೆಡವಲಾರೆ ಎಂದು ಹೇಳಿದ್ದಾರೆ.

ಪವಾರ್ ಅವರಿಗೆ ಕ್ರಿಮಿನಲ್ ಲಾಯರ್ ಆಗಿ 15 ವರ್ಷಗಳ ಅನುಭವ ಇದೆ. ಅವರು 1992ರ ಕೋಮುಗಲಭೆ ಪ್ರಕರಣದಲ್ಲಿ ಡಿಫೆನ್ಸ್ ವಕೀಲರಾಗಿ ಕಾರ್ಯಕೈಗೊಂಡಿದ್ದರು. ಇದರ ಒಂದು ಪ್ರಕರಣದಲ್ಲಿ 40 ಮಂದಿಯನ್ನು ಖುಲಾಸೆಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಇನ್ನೊಂದು ಇಂತಹುದೇ ಪ್ರಕರಣದಲ್ಲಿ 20 ಮಂದಿಯ ಬಿಡುಗಡೆಯಾಗಿತ್ತು.

ಕಾನೂನು ವೃತ್ತಿಗೆ ಕಾಲಿಡುವ ಮುನ್ನ ಅವರು ಮುನ್ಸಿಪಲ್ ಅಧಿಕಾರಿಯಾಗಿದ್ದರು. ವಕೀಲರಾಗಿ ಕಾರ್ಯನಿರ್ವಹಿಸುವುದು ತನಗೆ ಉದ್ಯೋಗ ತೃಪ್ತಿ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಖಾಜ್ಮಿ ಸಮರ್ಥನೆ
ಈ ಮಧ್ಯೆ ಕಸಬ್ ವಕೀಲರಾಗಿದ್ದ ಅಬ್ಬಾಸ್ ಖಾಜ್ಮಿ ತನ್ನ ಮೇಲಿನ ಅಸಕಾರದ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೆ ತನ್ನ ನಡೆಯನ್ನು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿರುವ ಅವರು ತನ್ನನ್ನು ವಜಾಗೊಳಿಸಿರುವುದರ ವಿರುದ್ಧ ಕಾನೂನು ಸಮರ ಹೂಡುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ