ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11: ಗುಪ್ತಚರ ವರದಿಗಳನ್ನು ನಿರ್ಲಕ್ಷಿಸಿದ್ದ ಅಧಿಕಾರಿಗಳು! (Mumbai attack | 26/11 | RD Pradhan | Maharashtra govt)
Bookmark and Share Feedback Print
 
ಕಳೆದ ವರ್ಷದ ನವೆಂಬರ್ 26ರ ಮುಂಬೈ ಉಗ್ರರ ದಾಳಿ ಕುರಿತು ಬಂದಿದ್ದ ಗುಪ್ತಚರ ವರದಿಗಳನ್ನು ಮಹಾರಾಷ್ಟ್ರ ಸರಕಾರದ ಹಿರಿಯ ಅಧಿಕಾರಿಗಳು ನಿರ್ಲಕ್ಷಿಸಿದ್ದರು ಎಂದು ಆರ್.ಡಿ. ಪ್ರಧಾನ್ ಸಮಿತಿಯು ವರದಿ ಮಾಡಿದೆ.

26/11 ಘಟನೆಯನ್ನು ತಪ್ಪಿಸಲು ವಿಫಲವಾಗಿರುವುದರ ಕುರಿತು ತನಿಖೆ ನಡೆಸಲು ಪ್ರಧಾನ್ ನೇತೃತ್ವದ ಸಮಿತಿಯನ್ನು ಮಹಾರಾಷ್ಟ್ರ ಸರಕಾರ ರಚಿಸಿತ್ತು.

ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಇಲಾಖೆಯಿಂದ ಬಂದಿದ್ದ ಅಮೂಲ್ಯ ಮಾಹಿತಿಗಳತ್ತ ರಾಜ್ಯದ ಹಿರಿಯ ಅಧಿಕಾರಿಗಳು ಗಮನವನ್ನೇ ಕೊಟ್ಟಿಲ್ಲ. ಅದು ಎಲ್ಲಿಯವರೆಗೆ ಅಂದರೆ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಹಸ್ತಾಂತರವಾಗುತ್ತಿತ್ತೇ ಹೊರತು, ಯಾರು ಕೂಡ ಕಣ್ಣೆತ್ತಿ ನೋಡುವ ಗೋಜಿಗೆ ಹೋಗುತ್ತಿರಲಿಲ್ಲ.

ಭೀಕರ ಘಟನೆಯ ಭವಿಷ್ಯ ನುಡಿದಿದ್ದ ವರದಿಗಳನ್ನು ಕೊನೆಗೆ ಪರಿಶೀಲಿಸಿದ್ದು ಇಂತಹ ಸಂಕೀರ್ಣ ವರದಿಗಳ ಮೇಲೆ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರದ ಕಿರಿಯ ಅಧಿಕಾರಿಗಳು!

ಘಟನೆ ಸಂದರ್ಭದಲ್ಲಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಹಸನ್ ಗಫೂರ್ ಬಗ್ಗೆ ತೀಕ್ಷ್ಣ ಆರೋಪಗಳನ್ನು ಮಾಡಲಾಗಿದೆ. ಭಿನ್ನ ಕಡೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದ ಪೊಲೀಸರ ಶ್ರಮ ವ್ಯರ್ಥಗೊಳ್ಳುವುದನ್ನು ತಪ್ಪಿಸಲು ಅವರು ನಿಯಂತ್ರಣ ಕೊಠಡಿಯ ಸಂಪೂರ್ಣ ಜವಾಬ್ದಾರಿಯನ್ನು ಕೈಗೆ ತೆಗೆದುಕೊಳ್ಳಬೇಕಿತ್ತು. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಜಂಟಿ ಆಯುಕ್ತ (ಕ್ರೈಮ್) ರಾಕೇಶ್ ಮಾರಿಯಾ ಬಾಹ್ಯ ಕಾರ್ಯಗಳನ್ನು ಮತ್ತು ಜಂಟಿ ಆಯುಕ್ತ (ಕಾನೂನು ಸುವ್ಯವಸ್ಥೆ) ಕೆ.ಎಲ್. ಪ್ರಸಾದ್ ನಿಯಂತ್ರಣ ಕೊಠಡಿಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು.

ಆದರೆ ಆಯುಕ್ತ ಗಫೂರ್ ಅವರು ಪ್ರಸಾದ್‌ರನ್ನು ತಾಜ್ ಹೊಟೇಲ್‌ಗೆ ಮತ್ತು ಮರಿಯಾರನ್ನು ನಿಯಂತ್ರಣ ಕೊಠಡಿಗೆ ಕಳುಹಿಸಿದ್ದರು. ಮುಂಬೈ ಪೊಲೀಸ್ ಆಯುಕ್ತರ ಕಚೇರಿಯೊಳಗಿನ ಹೊಂದಾಣಿಕೆ ಮತ್ತು ಸಂವಹನ ಕೊರತೆಯಿರುವುದು ಇದರಿಂದ ಬಹಿರಂಗವಾಗಿದೆ ವರದಿ ಆರೋಪಿಸಿದೆ.

ಅದೇ ಹೊತ್ತಿಗೆ ನಿಯಂತ್ರಣ ಕೊಠಡಿಯಲ್ಲಿದ್ದ ರಾಕೇಶ್ ಮರಿಯಾ ಮತ್ತು ಅವರ ಜತೆಗಿದ್ದ ಇತರ ಸಿಬ್ಬಂದಿಗಳ ಕಾರ್ಯವನ್ನು ಸಮಿತಿ ಶ್ಲಾಘಿಸಿದೆ.

ಮರಿಯಾ ವಿರುದ್ಧ ಇತ್ತೀಚೆಗಷ್ಟೇ ದಿವಂಗತ ಅಶೋಕ್ ಕಾಮ್ಟೆ ಪತ್ನಿ ವಿನಿತಾ ಕಾಮ್ಟೆ ಆರೋಪಗಳ ಸುರಿಮಳೆ ಸುರಿಸಿದ್ದರು. ಮರಿಯಾ ಸೂಕ್ತ ಸಂದರ್ಭದಲ್ಲಿ ಅಶೋಕ್ ಕಾಮ್ಟೆ, ಎಟಿಎಸ್ ಮುಖ್ಯಸ್ಥ ಕರ್ಕರೆ ಮತ್ತು ವಿಜಯ ಸಾಲಸ್ಕರ್ ಅವರಿಗೆ ಸಹಾಯ ಮಾಡುತ್ತಿದ್ದರೆ ಅವರ ಜೀವವನ್ನು ಉಳಿಸಬಹುದಿತ್ತು ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ