ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನೊಬ್ಬ ದುಂದುಗಾರ ಸಚಿವನ ಹೋಟೇಲ್ ವೆಚ್ಚ 36 ಲಕ್ಷ! (Austerity Drive | UPA | New Delhi)
Bookmark and Share Feedback Print
 
ಮಿತವ್ಯಯದ ಧ್ಯೇಯವನ್ನು ಹಮ್ಮಿಕೊಂಡ ಕಾಂಗ್ರೆಸ್ ತನ್ನ ಸಚಿವರು ಸಂಸದರಿಗೆ ದುಂದುವೆಚ್ಚವನ್ನು ನಿಲ್ಲಿಸುವಂತೆ ಫರ್ಮಾನು ಹೊರಡಿಸಿದ್ದು, ಸಚಿವರುಗಳು ವಿಮಾನಗಳ ಇಕಾನಮಿ ದರ್ಜೆಯಲ್ಲಿ ಪ್ರಯಾಣಿಸಿದ್ದು ಎಲ್ಲ ನಡೆದು ಕೆಲವು ದಿನಗಳಾದವು. ದೇಶದಲ್ಲಿ ಬರ ಹಾಗೂ ನೆರೆಯ ಹಾಹಾಕಾರವೆದ್ದಿದ್ದರೂ ಜನತೆ ಸಮಸ್ಯೆ ಅನುಭವಿಸುತ್ತಿದ್ದರೂ, ಈ ಸಚಿವರು ಮಾತ್ರ ಕಳೆದ ಆರು ಕಳೆದ ಆರು ತಿಂಗಳಿನಿಂದ ಇಲ್ಲಿನ ಪಂಚತಾರಾ ಅಶೋಕಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಕೇಂದ್ರ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ಮುಖಂಡ ಸುಲ್ತಾನ್ ಅಹ್ಮದ್ ಅವರ ಊಟ ಸೇರಿದಂತೆ ಪಾವತಿಯಾದ ಮೊತ್ತ ಸುಮಾರು 36ಲಕ್ಷ. ಇದು ತೆರಿಗೆದಾರರ ಹಣ. ಅವರು ಕಳೆದ ಜೂನ್ ತಿಂಗಳ ಒಂದನೇ ತಾರಿಕಿನಿಂದ ತಮ್ಮ ವಾಸ್ತವ್ಯಕ್ಕೆ ಹೋಟೇಲ್ ಅಶೋಕವನ್ನು ಅವಲಂಭಿಸಿದ್ದಾರೆ. ಅವರು ಹೋಟೇಲಿನ 1434 ಕೊಠಡಿ ಸಂಖ್ಯೆಯಲ್ಲಿ ತಂಗಿದ್ದಾರೆ. ಒಂದು ರಾತ್ರಿಗೆ ಇದರ ಬಾಡಿಗೆ ಸುಮಾರು 20 ಸಾವಿರ ರೂಪಾಯಿ.

ತನಗೆ ಕೇವಲ 15ದಿನಗಳ ಹಿಂದೆ ಅಧಿಕೃತ ನಿವಾಸ ಒದಗಿಸಲಾಗಿದ್ದು, ಇದರಲ್ಲಿ ಎಲ್ಲಾ ಸೌಲಭ್ಯಗಳು ಇಲ್ಲದ ಕಾರಣ ತಾನು ಈ ಹೋಟೇಲಿನಲ್ಲಿ ತಂಗಿದ್ದೇನೆ ಎಂಬುದು ಸುಲ್ತಾನ್ ಅವರ ಸಮಜಾಯಿಷಿಯಾಗಿದೆ. ಕೇಂದ್ರ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವರಾಗಿರುವ ಅಹಮದ್ ಅವರಿಗೆ ಶುಲ್ಕವನ್ನು ಸ್ವತಃ ಭರಿಸುವಂತೆ ಪಕ್ಷದ ಮುಖ್ಯಸ್ಥೆ ಹಾಗೂ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಸೂಚಿಸಿರುವುದಾಗಿ ಮಮತಾ ಅವರ ಆಪ್ತರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ