ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೇಣುಕಾ ಚೌಧರಿ ಕಚೇರಿಗೆ ಬೆಂಕಿ ಇಟ್ಟ ಟಿಆರ್ಎಸ್ (TRS | Renuka | Khammam | AP)
Bookmark and Share Feedback Print
 
ಆಂಧ್ರದ ಕಮ್ಮಮ್ ಜಿಲ್ಲೆಯಲ್ಲಿರುವ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ರೇಣುಕಾ ಚೌಧರಿ ಅವರ ಕಚೇರಿಗೆ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಕಾರ್ಯಕರ್ತರು ಬುಧವಾರ ಬೆಂಕಿ ಹಚ್ಚಿದ್ದಾರೆ.

ರೇಣುಕಾ ಕಚೇರಿ ಮೇಲೆ ಪೆಟ್ರೋಲ್ ಸುರಿದ ದುಷ್ಕರ್ಮಿಗಳು ಬಳಿಕ ಬೆಂಕಿ ಹಚ್ಚಿದ್ದು, ಪರಿಣಾಮ ಕಚೇರಿಯ ಬಾಗಿಲು ಹಾಗೂ ಕಿಟಿಕಿಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಆರ್ಎಸ್ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿದೆ.

ಕಚೇರಿ ಮೇಲೆ ದಾಳಿ ನಡೆಸಿರುವ ಟಿಆರ್ಎಸ್ ಕಾರ್ಯಕರ್ತರು ತಮ್ಮ ದುಷ್ಕೃತ್ಯದ ಬಳಿಕ ಕ್ಷಿಪ್ರವಾಗಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಪಕ್ಷದ ನಾಯಕ ಕೆ. ಚಂದ್ರಶೇಖರ್ ರಾವ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಪತ್ರವೊಂದರಲ್ಲಿ ಹೇಳಿರುವ ಟಿಆರ್ಎಸ್ ಕಾರ್ಯಕರ್ತರು, ಇಂತಹ ಇನ್ನಷ್ಟು ಕೃತ್ಯಗಳನ್ನು ಎಸಗುವುದಾಗಿ ಬೆದರಿಕೆ ಹಾಕಿದ್ದಾರೆ.

ಟಿಆರ್ಎಸ್ ಕಾರ್ಯಕರ್ತರು ಭಾರೀ ಭದ್ರತೆಯ ರೇಣುಕಾ ಚೌಧರಿಯವರ ಮನೆಮೇಲೂ ದಾಳಿ ನಡೆಸಲು ಯತ್ನಿಸಿದ್ದು, ನೆರೆಹೊರೆಯವರ ಮಧ್ಯಪ್ರವೇಶದಿಂದಾಗಿ ಅವರ ಕಾರ್ಯ ಸಫಲವಾಗಿರಲಿಲ್ಲ. ಬಳಿಕ ಚಳುವಳಿಗಾರರು ಉರಿಯುತ್ತಿರುವ ಬಟ್ಟೆಯನ್ನು ಚೌಧರಿ ಮನೆಯೊಳಗೆ ಎಸೆದಿದ್ದರು.

ಚೌಧರಿಯವರು ತೆಲಂಗಾಣ ಚಳುವಳಿಯನ್ನು ವಿರೋಧಿಸುತ್ತಿರುವುದೇ ಅವರ ಮನೆ ಹಾಗೂ ಕಚೇರಿ ಮೇಲೆ ನಡೆದಿರುವ ದಾಳಿಗಳಿಗೆ ಕಾರಣ ಎಂಬುದಾಗಿ ಕಮ್ಮಮ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರುವ ರೇಣುಕಾ ಚೌಧರಿ ಇಂತಹ ಕ್ಷುಲ್ಲಕ ಬೆದರಿಕೆಗಳಿಗೆಲ್ಲ ತಾನು ಬೆದರುವುದಿಲ್ಲ ಎಂದು ಹೇಳಿದ್ದಾರೆ. ತನ್ನ ಮನೆಗೆ ಬೆಂಕಿ ಹಚ್ಚುವ ಮೂಲಕ ಟಿಆರ್ಎಸ್ ತನ್ನ ಸಣ್ಣತನ ತೋರಿದೆ ಎಂದು ಅವರು ಟೀಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ