ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕ್ಕಳೇ, ರಾಜಕೀಯ ಸೇರಿ: ರಾಹುಲ್ ಗಾಂಧಿ ಆಹ್ವಾನ (Rahul | school kids | join politics)
Bookmark and Share Feedback Print
 
PTI
ಸಂಸತ್ ಭವನಕ್ಕೆ ಮಂಗಳವಾರ ಭೇಟಿ ನೀಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಅದೊಂದು ಸಿಹಿಯಾದ ಅಚ್ಚರಿ. ಈ ಮಕ್ಕಳೊಂದಿಗೆ ಒಂದಿಷ್ಟು ಹೊತ್ತು ಕಳೆಯಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಮುಂದಾಗಿದ್ದು, ಕೆಲವು ಕ್ಷಣಗಳನ್ನು ಅವರೊಂದಿಗೆ ಕಳೆದರು. ಈ ಸಂದರ್ಭದಲ್ಲಿ ಅವರೊಂದಿಗೆ ಸಂವಾದ ನಡೆಸಿದ ರಾಹುಲ್ ಮಕ್ಕಳನ್ನು ರಾಜಕೀಯಕ್ಕೆ ಆಹ್ವಾನಿಸಿದರು.

ಪಂಜಾಬಿನ ಹೆರಿಟೇಜ್ ಪಬ್ಲಿಕ್ ಶಾಲೆಯ ಮಕ್ಕಳು ಸಂಸದ್ ಭವನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸಂಸದ್ ಭವನಕ್ಕೆ ಸುತ್ತುಹಾಕುತ್ತಾ ವೀಕ್ಷಿಸುತ್ತಿದ್ದಾಗ, ಈ ಐತಿಹಾಸಿಕ ಕಟ್ಟಡದ ವೃತ್ತಾಕಾರದ ಮೊಗಸಾಲೆಯಲ್ಲಿ ರಾಹುಲ್ ಎದುರಾದರು.

ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ ರಾಹುಲ್, ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರವಹಿಸಲು ಅವರಿಗೆ ಉತ್ತೇಜನ ನೀಡಿದರು. ಅಲ್ಲದೆ "ಸೇವಾ ಉದ್ದೇಶದಿಂದ ರಾಜಕೀಯಕ್ಕೆ ಸೇರಿರಿ ಮಕ್ಕಳೇ" ಎಂಬ ಸಲಹೆ ನೀಡಿದರು. ರಾಹುಲ್ ಜತೆಗಿನ ಸಂವಾದದಿಂದ ಪುಳಕಿತರಾದ ಮಕ್ಕಳು ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು.

"ನಾವು ಸಂಸತ್ ಭವನ ನೋಡಲು ಆಗಮಿಸಿದ್ದೆವು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ನಮ್ಮನ್ನು ಭೇಟಿಯಾದರು. ಅವರೊಂದಿಗೆ ಕೆಲವು ಫೋಟೋ ಕ್ಲಿಕ್ ಮಾಡಿದ ಬಳಿಕ, ಅವರು ನಮಗೆ ರಾಜಕೀಯಕ್ಕೆ ಸೇರಲು ಆಹ್ವಾನ ನೀಡಿದರು" ಎಂಬುದಾಗಿ ಅನ್ಮೋಲ್ ಎಂಬ ವಿದ್ಯಾರ್ಥಿನಿ ಹೇಳುತ್ತಾರೆ.

ಸಂಗ್ರೂರ್‌ನ ಕಾಂಗ್ರೆಸ್ ಸಂಸದ ವಿಜಯ್ ಇಂದರ್ ಸಿಂಗ್ಲಾ ಅವರ ಪತ್ನಿ ದೀಪಾ ಸಿಂಗ್ಲಾ ಅವರ ಈ ಭೇಟಿಗೆ ವ್ಯವಸ್ಥೆ ಮಾಡಿದ್ದರು. ರಾಹುಲ್ ಭೇಟಿ ಬಳಿಕ ಉತ್ತೇಜಿತರಾಗಿರುವ ಮಕ್ಕಳಿಗೆ ರಾಜಕೀಯದಲ್ಲಿ ಆಸಕ್ತಿ ಹುಟ್ಟಿದೆ ಎಂದು ಸಿಂಗ್ಲಾ ವ್ಯಾಖ್ಯಾನಿಸಿದ್ದಾರೆ.

ನಿಮಗೆ ಸಂಸತ್ ಹೇಗನಿಸಿತು ಎಂದು ರಾಹುಲ್ ಮಕ್ಕಳ ಬಳಿ ಕೇಳಿದರು. ಅಲ್ಲದೆ, ರಾಜಕೀಯದಲ್ಲಿ ನಿಮಗೆ ಆಸಕ್ತಿಇದೆಯೇ ಎಂದೂ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಮಕ್ಕಳು ಅವಕಾಶ ಸಿಕ್ಕರೆ ತಾವು ರಾಜಕೀಯಕ್ಕೆ ಸೇರುವುದಾಗಿ ಉತ್ತರಿಸಿದರೆಂದು ದೀಪಾ ಸಿಂಗ್ಲಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ