ದೇಶದ ಮೇಲೆ ಉಗ್ರಗಾಮಿಗಳಿಂದ ನಡೆಯುತ್ತಿರುವ ಉಗ್ರರ ದಾಳಿ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ, 'ಹಿಂದೂ ಉಗ್ರವಾದದ' ಬಗ್ಗೆ ಪ್ರಸ್ತಾಪಿಸಿದ ಪರಿಣಾಮ ಭಾರೀ ಕೋಲಾಹಲಕ್ಕೆ ಎಡೆಮಾಡಿಕೊಟ್ಟ ಪ್ರಸಂಗ ನಡೆಯಿತು.
ಬುಧವಾರ ಭಯೋತ್ಪಾದನೆ ಕುರಿತಂತೆ ಚಿದಂಬರಂ ಮಾತನಾಡುತ್ತ ಹಿಂದೂ ಉಗ್ರವಾದ ಕೂಡ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ ಎಂದಾಗ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೋಲಾಹಲ ಎಬ್ಬಿಸಿದರು.
ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ನಂತರ ಸ್ಪಷ್ಟನೆ ನೀಡಿದ ಗೃಹ ಸಚಿವರು, ಯಾರನ್ನೂ ದೂಷಿಸುವ ಉದ್ದೇಶದಿಂದ ಹಿಂದೂ ಉಗ್ರವಾದದ ಕುರಿತು ಪ್ರಸ್ತಾಪಿಸಿಲ್ಲ, ಅಲ್ಲದೆ ಉಗ್ರವಾದಕ್ಕೆ ಸಮುದಾಯವನ್ನು ದೂರುತ್ತಿಲ್ಲ ಎಂದರು. ಅಂತೂ ರಾಜ್ಯಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾದ ಹಿಂದೂ ಉಗ್ರವಾದದ ಹೇಳಿಕೆಗೆ ಚಿದಂಬರಂ ಸ್ಪಷ್ಟನೆ ನೀಡಿದ ನಂತರ ಕಲಾಪ ಮುಂದುವರಿಯಿತು.