ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿ ಸಹೋದರರನ್ನು ಸಂಪುಟದಿಂದ ಕಿತ್ತು ಹಾಕಿ: ಯಡ್ಡಿಗೆ ನಾಯ್ಡು (Reddy brothers | Karnataka | B S Yeddyurappa | N Chandrababu Naidu)
Bookmark and Share Feedback Print
 
ಸಂಪುಟ ಸಹೋದ್ಯೋಗಿಗಳು ಮತ್ತು ಗಣಿ ಧಣಿಗಳಿಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶರಣಾಗಿದ್ದಾರೆ ಎಂದು ಆರೋಪಿಸಿರುವ ಟಿಪಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸಹೋದರರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕುವಂತೆ ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ರೆಡ್ಡಿ ಸಹೋದರರ ವಿರುದ್ಧ ತನ್ನ ಹಾಗೂ ಸಮಾನ ಮನಸ್ಕ ಪಕ್ಷಗಳ ಹೋರಾಟ ನಿಲ್ಲದು ಎಂದು ನಾಯ್ಡು ಇದೇ ಸಂದರ್ಭದಲ್ಲಿ ಗುಡುಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ರೆಡ್ಡಿ ಸಹೋದರರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ತೆಲುಗು ದೇಶಂ ಪಕ್ಷ ಮತ್ತು ಎಡಪಕ್ಷಗಳು ಕಳೆದ ವಾರ ಒತ್ತಾಯಿಸಿದ್ದವು.

ಕರ್ನಾಟಕ ಮುಖ್ಯಮಂತ್ರಿಯವರು ಗಣಿ ಸಹೋದರರಿಗೆ (ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ) ಹೆದರುತ್ತಿದ್ದಾರೆ. ಅವರು ಗಣಿ ಮಾಫಿಯಾಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಯಡಿಯೂರಪ್ಪನವರನ್ನು ಟೀಕಿಸಿದರು.

ಮತ್ತೂ ಮುಂದುವರಿದ ನಾಯ್ಡು, ಇಬ್ಬರೂ ಸಚಿವರನ್ನು ಯಡಿಯೂರಪ್ಪ ಸಂಪುಟದಿಂದ ಕೈ ಬಿಡಬೇಕೆಂಬುದು ನನ್ನ ಬೇಡಿಕೆ. ಅವರು ಸರಕಾರಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ವಾರ ದೆಹಲಿಯಲ್ಲಿ ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಸಮಾನ ಮನಸ್ಕ ಪಕ್ಷಗಳ ಸಭೆಯೊಂದನ್ನು ತಾನು ಕರೆದಿರುವುದಾಗಿ ಹೇಳಿದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತಾವು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲಿರುವುದಾಗಿ ತಿಳಿಸಿದರು.

ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಸಾಕಷ್ಟು ಗಣಿ ಚಟುವಟಿಕೆಗಳನ್ನು ನಡೆಸುತ್ತಿರುವ ರೆಡ್ಡಿ ಸಹೋದರರು ಸಚಿವರಾಗಿ ಮುಂದುವರಿಯಬಾರದು, ಈ ನಿಟ್ಟಿನಲ್ಲಿ ನನ್ನ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ