ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಸ್ತ್ರಾಸ್ತ್ರಗಳ ಅವ್ಯವಹಾರ: ಸಿಕ್ಕಿಬಿದ್ದ 41 ಸೇನಾಧಿಕಾರಿಗಳು! (Army | NSP Weapons | Pistols | Rifles)
Bookmark and Share Feedback Print
 
ಖಾಸಗಿ ಬಳಕೆಗೆಂದೇ ಸರ್ಕಾರ ಕಡಿಮೆ ಬೆಲೆಯಲ್ಲಿ ನೀಡುವ ಶಸ್ತ್ರಾಸ್ತ್ರಗಳನ್ನು ಹೆಚ್ಚು ಬೆಲೆಗೆ ಕಾಳಸಂತೆಯಲ್ಲಿ ಮಾರಿದ 41 ಸೇನಾ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಸೇನಾಧಿಕಾರಿಗಳಿಗೆ 'ನಾನ್ ಸರ್ವೀಸ್ ಪ್ಯಾಟರ್ನ್' ಶಸ್ತ್ರಾಸ್ತ್ರಗಳೆಂಬ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ತಮ್ಮ ಖಾಸಗಿ ಬಳಕೆಗೆ ಶಸ್ತ್ರಾಸ್ತ್ರ ಬಳಸಲು ಸರ್ಕಾರ ಅನುವು ಮಾಡಿಕೊಟ್ಟಿದೆ. ನಿರ್ಬಂಧಿಸಲ್ಪಟ್ಟ 9ಎಂಎಂ ಪಿಸ್ತೂಲು, 30 ಬೋಲ್ಟ್ ಆಕ್ಷನ್ ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಈ ಯೋಜನೆಯಡಿಯಲ್ಲಿ ಸೇನಾಧಿಕಾರಿಗಳು ಕಡಿಮೆ ಬೆಲೆಗೆ ಖರೀದಿಸಿ ಇಟ್ಟಕೊಳ್ಳಬಹುದು. ಇಂಥ ಯೋಜನೆಯ ದುರುಪಯೋಗ ಪಡಿಸಿಕೊಂಡ 41 ಮಂದಿ ಸೇನಾಧಿಕಾರಿಗಳು ಕಡಿಮೆ ಬೆಲೆಗೆ ಶಸ್ತ್ರಾಸ್ತ್ರ ಖರೀದಿಸಿ ಕಾಳಸಂತೆಗೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಸತ್ಯವೀಗ ಬೆಳಕಿಗೆ ಬಂದಿದೆ.

ಈ 41 ಮಂದಿ ಸೇನಾಧಿಕಾರಿಗಳ ಪೈಕಿ 4 ಮಂದಿ ನಿವೃತ್ತ ಸೇನಾಧಿಕಾರಿಗಳು. ಶ್ರೀನಗರ ಜಿಲ್ಲಾಧಿಕಾರಿಗಳು ನೀಡುವ ಮಾಹಿತಿಗಳ ಪ್ರಕಾರ, ಈ 41 ಮಂದಿಯಲ್ಲಿ ಇಬ್ಬರು ಮೇಜರ್ ಜನರಲ್‌ಗಳೂ, ಇಬ್ಬರು ಬ್ರಿಗೇಡಿಯರ್‌ಗಳೂ ಸೇರಿದ್ದಾರೆ.

ಈ ಕುರಿತು ಮಾತನಾಡಿದ ರಕ್ಷಣಾ ಸಚಿವ ಎ.ಕೆ.ಆಂಟನಿ, ಕೇವಲ ಖಾಸಗಿ ಬಳಕೆಗೆಂದು ಮತ್ರ ನೀಡುವ ಈ ಸೌಲಭ್ಯವನ್ನು ದುರುಪಯೋಗ ಪಡಿಸಿದ ಕಾರಣದಿಂದ ಈ 41 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣದ ಬಗ್ಗೀ ಶೀಘ್ರವೇ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ