ಬಾಂಗ್ಲಾದಿಂದ ಉಲ್ಫಾ ವರಿಷ್ಠ ರಾಜ್‌ಕೋವಾ ಭಾರತಕ್ಕೆ ಹಸ್ತಾಂತರ
ಗುವಾಹಟಿ, ಶುಕ್ರವಾರ, 4 ಡಿಸೆಂಬರ್ 2009( 11:40 IST )
ಬಾಂಗ್ಲಾದೇಶದಲ್ಲಿ ಬಂಧಿಸಲ್ಪಟ್ಟಿದ್ದ ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಫಾದ ಸ್ಥಾಪಕ, ವರಿಷ್ಠ ಅರಬಿಂದ ರಾಜ್‌ಕೋವಾ, ಆತನ ಪತ್ನಿ ಹಾಗೂ ಪ್ರಮುಖ ಉಗ್ರರನ್ನು ಶುಕ್ರವಾರ ಬಾಂಗ್ಲಾ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ.
53ರ ಹರೆಯದ ರಾಜ್‌ಕೋವಾನನ್ನು ಸೋಮವಾರ ಢಾಕಾದಲ್ಲಿ ಬಂಧಿಲಾಗಿತ್ತು. ಬಂಧಿತ ರಾಜ್‌ಕೋವಾ ಕೇಂದ್ರದೊಂದಿಗೆ ಮಾತುಕತೆಗೆ ಶಾಂತಿ ಮಾತುಕತೆ ನಡೆಸಲು ಒಲವು ತೋರಿರುವ ಹಿನ್ನೆಲೆಯಲ್ಲಿ ಆತನನ್ನು ಹಾಗೂ ಸಹಚರರನ್ನು ಇಂದು ಬಾಂಗ್ಲಾ ಏಜೆನ್ಸಿ ಮೇಘಾಲಯದಲ್ಲಿ ಅಧಿಕಾರಗಳಿಗೆ ಹಸ್ತಾಂತರಿಸಿದರು.
ಬಂಧಿತ ರಾಜ್‌ಕೋವಾನ ಜತೆಗೆ ಉಲ್ಫಾ ಮಿಲಿಟರಿ ಕಾರ್ಯಾಚರಣೆಯ ಸಹಾಯಕ ವರಿಷ್ಠ ರಾಜು ಬರುವಾ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಜೈಂಟಿಯಾ ಹಿಲ್ಸ್‌ನ ದ್ವಾಕಿ ಔಟ್‌ಪೋಸ್ಟ್‌ನ ಬಿಎಸ್‌ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೆ ಬಂಧಿತರಲ್ಲಿ ರಾಜ್‌ಕೋವಾ ಪತ್ನಿ, ಇಬ್ಬರು ಮಕ್ಕಳು, ರಾಜು ಬರುವಾನ ಪತ್ನಿ, ಮಗ ಸೇರಿದ್ದಾರೆ.
1979ರಲ್ಲಿ ಪ್ರತ್ಯೇಕತಾ ಹೋರಾಟದೊಂದಿಗೆ ಉಲ್ಫಾ ಸಂಘಟನೆಯ ಸ್ಥಾಪಕ ಸದಸ್ಯನಾಗಿರುವ ರಾಜ್‌ಕೋವಾ ಸತತ ಮೂರು ದಶಕಗಳ ಕಾಲ ಉಗ್ರಗಾಮಿ ಚಟುವಟಿಕೆ ನಡೆಸಿದ್ದು, ಇದೀಗ ಬಾಂಗ್ಲಾದಲ್ಲಿ ಬಂಧಿತನಾಗಿರುವ ರಾಜ್‌ಕೋವಾನ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.