ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಕಾರಣಿಗಳನ್ನು ತಯಾರಿಸುವ ಸಂಸ್ಥೆಗಳು ಯಾಕಿಲ್ಲ? (Politician | IAS | IPS | Sushanth)
Bookmark and Share Feedback Print
 
"ಇತ್ತೀಚಿನ ದಿನಗಳಲ್ಲಿ ಚುನಾವಣೆಗೆ ಗುಣಮಟ್ಟದ ಅಭ್ಯರ್ಥಿಗಳು ಸಿಗುತ್ತಿಲ್ಲವಾದ್ದರಿಂದ ದೇಶದಲ್ಲಿ ಬುದ್ಧಿವಂತ ರಾಜಕಾರಣಿಗಳೇ ಇಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲಿ, ಹಿಂದೆ ಆಶ್ರಮಗಳಲ್ಲಿ ತರಬೇತಿ ಪಡೆದಂತಹ ರಾಮ, ಕೃಷ್ಣ, ವಿಕ್ರಮಾದಿತ್ಯರಂತಹ ನಾಯಕರುಗಳೇ ಇಲ್ಲದೆ ದೇಶ ರಾಮರಾಜ್ಯ ಹೇಗಾಗಲು ಸಾಧ್ಯ" ಎಂಬುದಾಗಿ ಸಂಸದರೊಬ್ಬರು ಲೋಕಸಭೆಯಲ್ಲಿ ಪ್ರಶ್ನಿಸಿದ ಅಪರೂಪದ ಘಟನೆ ಶುಕ್ರವಾರ ಸಂಭವಿಸಿದೆ.

ಮ್ಯಾನೇಜ್‌ಮೆಂಟ್ ವೃತ್ತಿಪರರ ತರಬೇತಿಗೆ ಐಐಎಂಗಳು, ಸಮರ್ಥ ಅಧಿಕಾರಿಗಳನ್ನು ಸೃಷ್ಟಿಸಲು ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ನಾಗರಿಕ ಸೇವಾ ಪರೀಕ್ಷೆಗಳು ಇರುವಾಗ ಉತ್ತಮ ರಾಜಕಾರಣಿಗಳನ್ನು ತಯಾರಿಸುವ ಸಂಸ್ಥೆಗಳು ಯಾಕಿಲ್ಲ ಎಂಬುದು ಬಿಜೆಪಿ ಸಂಸದ ಸುಶಾಂತ್ ಅವರ ಪ್ರಶ್ನೆ.

ಉತ್ತಮ ರಾಜಕಾರಣಿಗಳ ಕೊರತೆ ಎದುರಿಸುತ್ತಿರುವ ಭಾರತಕ್ಕೆ 21ನೇ ಶತಮಾನದ ಶಕ್ತಿಯಾಗಿ ರೂಪುಗೊಳ್ಳುವ ಬಯಕೆ ಇದ್ದರೆ ರಾಮ, ಕೃಷ್ಣರಂತಹ ರಾಜಕಾರಣಿಗಳನ್ನು ತಯಾರಿಸುವ ವಿಶೇಷ ತರಬೇತಿ ಸಂಸ್ಥೆಗಳನ್ನು ಅದು ಮೊದಲು ಸ್ಥಾಪಿಸಬೇಕು ಎಂದು ಅವರು ಪ್ರಶ್ನೋತ್ತರ ವೇಳೆಯಲ್ಲಿ ಒತ್ತಾಯಿಸಿದರು.

"ಒಳ್ಳೆಯ ವೈದ್ಯ, ವಕೀಲ ಅಥವಾ ವ್ಯವಸ್ಥಾಪಕರಾಗಲು ವಿಶೇಷ ತರಬೇತಿಯ ಅಗತ್ಯವಿದೆ ಎನ್ನುವುದಾದರೆ ಇದು ರಾಜಕೀಯಕ್ಕೂ ಅನ್ವಯವಾಗಬೇಕು. ಎಲ್ಲ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಉತ್ತಮ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿವೆ. ಮೂಲ ತರಬೇತಿ, ಪುನಶ್ಚೇತನ ತರಗತಿ ಮತ್ತು ವಿಶೇಷ ಕೋರ್ಸ್‌ಗಳನ್ನು ರಾಜಕಾರಣಿಗಳಿಗೆ ನೀಡುವ ತರಬೇತಿ ಸಂಸ್ಥೆಗಳು ಬೇಕು" ಎಂಬುದು ಸುಶಾಂತ್ ಪ್ರತಿಪಾದನೆ
ಸಂಬಂಧಿತ ಮಾಹಿತಿ ಹುಡುಕಿ