ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏಳು ಮಕ್ಕಳ ರಕ್ಷಿಸಿ ಅಸು ನೀಗಿದ ಶಿಕ್ಷಕಿ (Nagapattinam | Students | Teacher | Van)
Bookmark and Share Feedback Print
 
ಶಾಲಾಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನೊಂದು ಜಿಲ್ಲೆಯ ವೇದಾರಣ್ಯಂ ಬಳಿ ದೇವಾಲಯದ ಕೆರೆಗೆ ಬಿದ್ದಾಗ, ವ್ಯಾನಿನಲ್ಲಿದ್ದ ಶಿಕ್ಷಕಿ ಮಕ್ಕಳನ್ನು ರಕ್ಷಿಸಲು ನೆರವಾಗಿದ್ದು, ಮತ್ತಷ್ಟು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದಾಗ ಸಾವನ್ನಪ್ಪಿದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವ್ಯಾನ್ ಕೆರೆಗೆ ಬಿದ್ದಾಗ ಚಾಲಕ ಮಹೇಂದ್ರನ್, ಕ್ಲೀನರ್ ಸುಬ್ರಮಣ್ಯನ್ ಹಾಗೂ ಶಿಕ್ಷಕಿ ಸುಗಂಧಿ ಅವರುಗಳು ವಾಹನದ ಕಿಟಿಕಿ ಒಡೆದು ಹೊರಬಂದಿದ್ದು, ಕಿಟಿಕಿ ಮೂಲಕ ಮಕ್ಕಳನ್ನು ಹೊರಗೆಳೆಯಲು ಆರಂಭಿಸಿದರು. ಈ ಸಂದರ್ಭದಲ್ಲಿ 21ರ ಹರೆಯದ ಸುಗಂಧಿ ಏಳು ಮಕ್ಕಳನ್ನು ರಕ್ಷಿಸಿದ್ದರು.

ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದು ದುರಂತಕ್ಕೆ ಕಾರಣವೆನ್ನಲಾಗಿದ್ದು ಜನರ ಆಕ್ರೋಶಕ್ಕೆ ಬೆದರಿ ಆತ ಜಾಗಖಾಲಿಮಾಡಿದ್ದ. ಕ್ಲೀನರ್ ಸುಬ್ರಮಣ್ಯನ್ ಮತ್ತು ಸುಗಂಧಿ ಅವರುಗಳು ಮಕ್ಕಳನ್ನು ರಕ್ಷಿಸಲು ಮುಂದಾದರು. ಇನ್ನಷ್ಟು ಮಕ್ಕಳನ್ನು ರಕ್ಷಿಸಲು ಮುಂದಾದ ಸುಗಂಧಿ ಈಜು ಗೊತ್ತಿಲ್ಲದಿದ್ದರೂ ನೀರಿಗೆ ಹಾರಿದ್ದು, ಸ್ವತಹ ಪ್ರಾಣ ಕಳೆದುಕೊಂಡರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ