ಕಳೆದ 30 ವರ್ಷಗಳಲ್ಲಿ ಗಂಗೋತ್ರಿ ಗ್ಲೇಸಿಯರ್ ಒಂದೂವರೆ ಕಿಲೋಮೀಟರ್ ಕರಗಿದೆ ಎಂಬುದಾಗಿ ಇಸ್ರೋದ ಅಂಕಿಅಂಶಗಳು ತಿಳಿಸಿವೆ.
ಭಾರತದ ಜೀವನದಿಯಾಗಿರುವ ಗಂಗಾದ ಮೂಲಸ್ಥಾನ ಗಂಗೋತ್ರಿಯು ಕರಗುತ್ತಿದ್ದು, ಕಳೆದೊಂದು ದಶಕದಲ್ಲಿ 15-20 ಮೀಟರ್‌ಗಳಷ್ಟು ಕರಗಿದೆ ಎಂಬುದಾಗಿ ಶನಿವಾರ ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಹೇಳಿದೆ. ಆದರೆ ಸಮಾಧಾನದ ಸಂಗತಿ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಗಂಗೋತ್ರಿಯ ಮಂಜುಗಡ್ಡೆ ಕರಗುವಿಕೆ ನಿಧಾನಗೊಂಡಿದೆ.
ಅದಾಗ್ಯೂ, ಗ್ಲೇಸಿಯರ್‌ನ ಭವಿಷ್ಯದ ಬಗ್ಗೆ ಕಳವಳ ಹೆಚ್ಚುತ್ತಿದೆ. ಯಾಕೆಂದರೆ ಅದರ ಗತಿಯು ಜಾಗತಿಕ ತಾಪಮಾನಕ್ಕೆ ಸಂಪರ್ಕಿತವಾಗಿ ಎಂದು ನಂಬಲಾಗಿದೆ.