ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿನಕರನ್ ಬಡ್ತಿಗೆ ಕಾನೂನು ಸಚಿವಾಲಯ ಅಡ್ಡಿ (Govt | SC collegium | elevate | Dinakaran)
Bookmark and Share Feedback Print
 
PTI
ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಾಧೀಶ ಪಿ.ಡಿ. ದಿನಕರನ್ ಅವರನ್ನು ಸುಪ್ರೀಂ ಕೋರ್ಟಿಗೆ ಬಡ್ತಿ ನೀಡುವ ಸುಪ್ರೀಂಕೋರ್ಟ್ ಸಮಿತಿಯ ವರದಿಯನ್ನು ಕೇಂದ್ರಸರ್ಕಾರ ತಳ್ಳಿಹಾಕಿದ್ದು, ವಾರಗಳಿಂದ ತಲೆದೋರಿರುವ ಅನಿಶ್ಚಿತತೆಗೆ ಅಂತ್ಯ ಹಾಡಿದೆ.

ದಿನಕರನ್ ಬಡ್ತಿಗೆ ಶಿಫಾರಸ್ಸು ಮಾಡಲಾಗಿರುವ ಕಡತವನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಅವರಿಗೆ ವಾಪಾಸ್ಸು ಕಳುಹಿಸಿದ್ದು, ಮರುಪರಿಶೀಲನೆಗೆ ವಿನಂತಿಸಲಾಗಿದೆ ಎಂಬುದಾಗಿ ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.

ದಿನಕರನ್ ಅವರ ಹೆಸರನ್ನು ಹೈಕೋರ್ಟ್ ನ್ಯಾಯಾಧೀಶರ ಹೆಸರಿನ ಪಟ್ಟಿಯಿಂದ ತೆಗೆದು ಹಾಕಿ, ಅವರನ್ನು ಸುಪ್ರೀಂ ಕೋರ್ಟಿಗೆ ಭಡ್ತಿ ನೀಡುವಂತೆ ದಿನಕರನ್ ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ದಿನಕರನ್ ಹಾಗೂ ಅವರ ಕುಟುಂಬವು ಅಕ್ರಮವಾಗಿ ಭೂ ವಶಮಾಡಿಕೊಂಡಿರುವ ಆಪಾದನೆ ಎದುರಿಸುತ್ತಿದ್ದು, ಈ ಕುರಿತು ನಡೆಸಲಾಗಿರುವ ತನಿಖೆಗಳು ಇದನ್ನು ಪುಷ್ಠೀಕರಿಸುವ ಕಾರಣ ಕಾನೂನು ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ ಎಂಬುದಾಗಿ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ