ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಲ್ಫಾ ಸಂಘಟನೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಬಾರುವಾ (Rajkhowa | ULFA | Assam | Paresh Barua | Guwahati)
Bookmark and Share Feedback Print
 
ಲಿಬರೇಷನ್ ಆಫ್ ಅಸ್ಸೋಮ್(ಉಲ್ಫಾ) ಮುಖ್ಯಸ್ಥ ಅರಬಿಂದಾ ರಾಜ್‌ಕೋವಾ ನಾಯಕತ್ವದ ಬಗ್ಗೆ ಪ್ರತ್ಯೇಕತವಾದಿ ಸಂಘಟನೆ ಉಲ್ಫಾದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಲೆಮರೆಸಿಕೊಂಡಿರುವ ಸಂಘಟನೆಯ ಮುಖ್ಯ ಕಮಾಂಡರ್ ಪರೇಶ್ ಬರುವಾ ತಿಳಿಸಿದ್ದಾರೆ.

ವಿವಿಧ ಅಸ್ಸಾಂ ದಿನ ಪತ್ರಿಕೆಗಳಿಗೆ ಬರುವಾ ಬರೆದ ಪತ್ರದಲ್ಲಿ, ತಮ್ಮ ಮತ್ತು ರಾಜ್‌ಕೋವಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ರಾಜ್‌ಕೋವಾ ಈಗ ಭಾರತೀಯ ಅಧಿಕಾರಿಗಳ ವಶದಲ್ಲಿದ್ದಾನೆ.

ಚೀನಾದ ಯಾನಾನ್ ಪ್ರಾಂತ್ಯದಲ್ಲಿ ತಲೆಮರೆಸಿಕೊಂಡಿರಬಹುದು ಎಂದು ತಿಳಿದಿರುವ, ಬಾರುವ ಭಾರತ ಸರ್ಕಾರ ಶಾಂತಿ ಮಾತುಕತೆಗೆ ಮುಂದಾಗಿರುವ ವಿಷಯದ ಬಗ್ಗೆ ಸಂಘಟನೆಯ ನಾಯಕರುಗಳಲ್ಲಿರುವ ಅಭಿಪ್ರಾಯಗಳೇನು ಎಂಬುದನ್ನು ಪತ್ರದಲ್ಲಿ ಪ್ರಸ್ತಾಪಿಸಿಲ್ಲ. ಆದರೆ ನಾಯಕ ರಾಜ್‌ಕೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಯಾರಿದ್ದು, ಬಾರುವಾ ಸಂಘಟನೆಯ ಮುಖ್ಯಸ್ಥನಿಗೆ ಭಾರತ ಸರ್ಕಾರದ ಆಮಿಷಗಳಿಗೆ ತಲೆಭಾಗದಂತೆ ಸಲಹೆ ನೀಡಿದ್ದಾರೆ.

ಪ್ರತ್ಯೇಕ ಅಸ್ಸಾಂ ರಾಜ್ಯದ ಬೇಡಿಕೆಗಾಗಿ ಹೋರಾಡಿದ 12ಸಾವಿರ ಹುತಾತ್ಮರನ್ನು ಮನದಲ್ಲಿರಿಸಿಕೊಂಡು ಸರ್ಕಾರದ ಷರತ್ತಿಗೆ ಒಪ್ಪಬಾರದು ಮತ್ತು ತಮ್ಮ ಪ್ರಸಕ್ತ ಸಂಘಟನೆಯ ನಿಲುವೇನು ಎಂಬುದನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಬೇಕು ಎಂದು ಬಾರುವಾ ತಮ್ಮ ನಾಯಕನಿಗೆ ಇ-ಮೇಲ್ ಮೂಲಕ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ