ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾತಿ ಪಿಡುಗನ್ನು ನಿರ್ಮೂಲನ ಮಾಡಿ: ಸುಪ್ರೀಂಕೋರ್ಟ್ (Supreme court | New delhi | Dalith | India)
Bookmark and Share Feedback Print
 
ಮೂವತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶ ಟಾಗೂರ್ ವಂಶಸ್ಥರು ಎಂಟು ದಲಿತರನ್ನು ಹತ್ಯೆ ಮಾಡಿದ ಐದು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ, ಭಾರತದಲ್ಲಿ ಜಾತಿ ಪದ್ಧತಿಯನ್ನು ನಿರ್ಮೂಲನ ಮಾಡಿ ಪ್ರಜಾಪ್ರಭುತ್ವ ಯಶಸ್ವಿಗೆ ಕಾರಣವಾಗಬೇಕೆಂದು ಅಭಿಪ್ರಾಯವ್ಯಕ್ತಪಡಿಸಿದೆ.

ಆರು ಆರೋಪಿಗಳನ್ನು ದೋಷಮುಕ್ತರನ್ನಾಗಿಸಿದ ಕೋರ್ಟ್, ಶತಮಾನಗಳಿಂದ ಭಾರತದಲ್ಲಿ ಜಾತಿ ಪದ್ಧತಿ ಬೇರೂರಿದೆ. ಆಗಾಗ ಅನೇಕ ಜೀವಗಳನ್ನು ಮೇಲ್ವರ್ಗದ ಜನರು ಕೆಳವರ್ಗದವರೆಂದು ಕರೆಯಿಸಿಕೊಂಡವರ ಜೀವಗಳನ್ನು ತೆಗೆಯುತ್ತಿರುವುದು ದುರಂತ ಎಂದು ನ್ಯಾಯಾಧೀಶರಾದ ದಲ್ವೀರ್ ಭಂಡಾರಿ ಮತ್ತು ಎ.ಕೆ.ಪಟ್ನಾಯಕ್ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿದೆ.

ಕೆಲವು ಸಾಕ್ಷಿಗಳ ಹೇಳಿಕೆಗಳು ಇಂತಹ ಪ್ರಕರಣಗಳಲ್ಲಿ ಭಯದಿಂದ ಕೂಡಿದ್ದರಿಂದ ಅವುಗಳನ್ನು ನಿರ್ಲಕ್ಷಿಸಿದೆ ಎಂದು ಕೋರ್ಟ್ ಹೇಳಿದೆ. ಟಾಕೂರ್ ವಂಶಕ್ಕೆ ಸೇರಿದ ಆರೋಪಿಗಳು ದಲಿತ ಜಾತಿಗೆ ಸೇರಿದ ಮುಗ್ದರನ್ನು ಹತ್ಯೆ ಮಾಡಿ, ಸಾಕ್ಷಿಗಳನ್ನು ಮುಚ್ಚಲು ಶವಗಳನ್ನು ಗಂಗಾನದಿಗೆ ಎಸೆದಿದ್ದರು. ಈ ಹತ್ಯೆಯನ್ನು ಕೆಳ ವರ್ಗದ ಜನ ಹಳ್ಳಿಯಲ್ಲಿ ಎಸಗಿದ ಡಕಾಯಿತಿಗೆ ಪಾಠ ಕಲಿಸಲು ಮಾಡಿದ್ದು ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ