ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ ಕಲಾಪ- 'ಲಿಬರ್ಹಾನ್' ವಾಗ್ದಾಳಿಗೆ ಪ್ರತಿಪಕ್ಷ ಸಜ್ಜು (Vajpayee | VHP | Liberhan | BJP | Parliament)
Bookmark and Share Feedback Print
 
PTI
ದೇಶಾದ್ಯಂತ ತೀವ್ರ ಕೋಮುದಳ್ಳುರಿ ಕಾರಣವಾದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಸಂಸತ್‌ನಲ್ಲಿ ಸೋಮವಾರದ ಕಲಾಪಪದಲ್ಲಿ ಲಿಬರ್ಹಾನ್ ತನಿಖಾ ವರದಿ ಕುರಿತು ನಡೆಯಲಿರುವ ಚರ್ಚೆ ಬಗ್ಗೆ ವಾಗ್ದಾಳಿ ನಡೆಸಲು ಬಿಜೆಪಿ, ಬಿಎಸ್ಪಿ ಸಜ್ಜಾಗಿದ್ದು, ಆ ನಿಟ್ಟಿನಲ್ಲಿ ಸಂಸತ್ ಕಲಾಪದಲ್ಲಿ ಇಂದು ತೀವ್ರ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ.

17ವರ್ಷಗಳ ಬಳಿಕ ಬಾಬರಿ ಧ್ವಂಸ ಪ್ರಕರಣದ ತನಿಖಾ ವರದಿಯನ್ನು ಲಿಬರ್ಹಾನ್ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪ್ರತಿಪಕ್ಷಗಳ ಒತ್ತಡದ ನಡುವೆ ಚಳಿಗಾಲದ ಅಧಿವೇಶನದಲ್ಲಿಯೇ ಲಿಬರ್ಹಾನ್ ವರದಿಯನ್ನು ಮಂಡಿಸಲಾಗಿತ್ತು. ಇದೀಗ ಲಿಬರ್ಹಾನ್ ವರದಿ ಕುರಿತು ಸಂಸತ್‌ನಲ್ಲಿ ಇಂದು ಮತ್ತು ನಾಳೆ ಚರ್ಚೆ ನಡೆಯಲಿದೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಕಳಂಕರಹಿತರು ಎಂದು ಲಿಬರ್ಹಾನ್ ಆಯೋಗ ಹೇಳಿರುವುದು ಬಿಜೆಪಿಯ ಪ್ರಮುಖರು ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೇ,ಸಮಾಜವಾದಿ ಪಕ್ಷ ಕೂಡ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.

ಮಸೀದಿ ಧ್ವಂಸ ಪ್ರಕರಣದಲ್ಲಿ ಸುದೀರ್ಘವಾಗಿ 17ವರ್ಷಗಳ ಕಾಲ ತನಿಖೆ ನಡೆಸಿರುವ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಅರುಣ್ ಶೌರಿ ಕೂಡ ತೀವ್ರ ವಾಗ್ದಾಳಿ ನಡೆಸಿದ್ದು, ಲಿಬರ್ಹಾನ್ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿದ್ದಲ್ಲದೆ, ಸಮಯವನ್ನೂ ಹಾಳುಮಾಡಿದ್ದಾರೆ. ಇದೊಂದು ಶುದ್ಧ ಇಡಿಯಟ್ ವರದಿ ಎಂದು ಸಿಎನ್‌ಎನ್-ಐಬಿಎನ್‌ಗೆ ನೀಡಿದ ಸಂದರ್ಶನದಲ್ಲಿ ಕಿಡಿಕಾರಿದ್ದರು.

ಆ ನಿಟ್ಟಿನಲ್ಲಿ ಇಂದು ಸಂಸತ್ ಅಧಿವೇಶನದಲ್ಲಿ ಲಿಬರ್ಹಾನ್ ವರದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಬಲವಾದ ಅಸ್ತ್ರಗಳನ್ನು ಪ್ರಯೋಗಿಸಲು ಸಜ್ಜಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ