ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂತಾರ್ಜಾತೀಯ ವಿವಾಹಿತರನ್ನು ರಕ್ಷಿಸಿ: ದೆಹಲಿ ಹೈ.ಕೋ (Delhi | Intercaste Marriage | High Court)
Bookmark and Share Feedback Print
 
ಮನೆಯವರ ಒಪ್ಪಿಗೆ ಇಲ್ಲದೆ, ಮನೆಬಿಟ್ಟುಹೋಗಿ ಮದುವೆಯಾದವರು ಹಾಗೂ ಅಂತರ್ಜಾತಿಯ ವಿವಾಹವಾದವರನ್ನು ಶೋಷಣೆಯಿಂದ ರಕ್ಷಿಸಬೇಕಾಗಿದೆ ಎಂದು ದೆಹಲಿ ಕೋರ್ಟ್ ಹೇಳಿದೆ.

"ಇಂಥಹ ಮದುವೆಗಳು ಸಮಾಜಿಕ ಬದಲಾವಣೆಯ ಪ್ರತೀಕವಾಗಿದ್ದು ಈ ಕುರಿತು ನಿರ್ಲಕ್ಷ್ಯ ಬೇಡ" ಎಂಬುದಾಗಿ ನ್ಯಾಯಾಧೀಶ ಸಮರ್ ವಿಶಾಲ್ ಅವರು ಅಂತರ್ಜಾತಿ ವಿವಾಹಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯಿಸಿದ್ದಾರೆ.

ಸವರ್ಣೀಯ ಪಂಗಡದ 18ರ ಹರೆಯದ ಯುವತಿಯೊಬ್ಬಳು ಕಳೆದ ಜುಲೈನಲ್ಲಿ ತನ್ನ ಪೋಷಕರ ವಿರೋಧದೊಂದಿಗೆ ದಲಿತ ಯುವಕನನ್ನು ವಿವಾಹವಾಗಿದ್ದು, ಇದಕ್ಕೆ ಆಕೆಯೆ ಹೆತ್ತವರು ಇವರಿಬ್ಬರಿಗೂ ಪ್ರಾಣ ಬೆದರಿಕೆ ಹಾಕಿದ್ದರು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು.

"ಹೆತ್ತವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾವರಿಗೆ ಕಿರುಕುಳ ನೀಡಿ ಸಾಯಿಸಿದಂಥ ಘಟನೆಗಳು ನಮ್ಮ ದೇಶದಲ್ಲಿ ಇಲ್ಲ. ಒಂದು ವೇಳೆ ಹೀಗೆ ಮಾಡಿದರೆ ಅದು 'ಮರ್ಯಾದೆ ಹತ್ಯೆ'ಯಂಥ ಘೋರ ಅಪರಾಧವಾಗುತ್ತದೆ" ಎಂದು ಕೋರ್ಟ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ