ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧಿ ಕೊಂದ ಮೂಲಭೂತವಾದಿಗಳಿಂದ್ಲೇ ಬಾಬ್ರಿ ಧ್ವಂಸ:ಎಡಪಕ್ಷ (Rajnath Singh | Parliament debate | Babri Masjid | Liberhan Commission)
Bookmark and Share Feedback Print
 
PTI
ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಲಿಬರ್ಹಾನ್ ಆಯೋಗ ನೀಡಿದ ವರದಿ ಕುರಿತು ಸೋಮವಾರ ಸಂಸತ್ ಕಲಾಪದಲ್ಲಿ ಬಿಸಿ,ಬಿಸಿ ಚರ್ಚೆ ನಡೆಯುವ ಮೂಲಕ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು.

'1992 ಡಿಸೆಂಬರ್ 6ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ ಭಾರತೀಯ ಜನತಾ ಪಕ್ಷದ ಪೂರ್ವ ನಿಯೋಜಿತವಾದ ಕೃತ್ಯ' ಎಂದು ಸಿಪಿಐ ಮುಖಂಡ ಗುರುದಾಸ್ ದಾಸ್‌ಗುಪ್ತಾ ಆರೋಪಿಸುವ ಮೂಲಕ ಲಿಬರ್ಹಾನ್ ಆಯೋಗ ವರದಿ ಕುರಿತು ಮೊದಲಿಗೆ ಚರ್ಚೆಗೆ ಚಾಲನೆ ನೀಡಿದರು.

ಪೂರ್ವನಿಯೋಜಿತವಾದ ಸಂಚಿನ ಮೂಲಕ ಬಾಬರಿ ಮಸೀದಿಯನ್ನು ನೆಲಕ್ಕುರುಳಿಸಲಾಯಿತು ಎಂದ ಅವರು, ಅಲ್ಲದೆ ಆ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ ಬಾಬರಿ ಮಸೀದಿಯನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು ಎಂದು ಕಿಡಿಕಾರಿದರು.

ಗಾಂಧಿಯನ್ನು ಕೊಂದ ಮೂಲಭೂತವಾದಿ ಗುಂಪುಗಳೇ ಬಾಬರಿ ಮಸೀದಿಯನ್ನೂ ಧ್ವಂಸಗೊಳಿಸುವಲ್ಲಿ ಸಫಲವಾಗಿದೆ ಎಂದು ಗಂಭೀರವಾಗಿ ಟೀಕಿಸಿದರು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡ ಮುಂಜಾಗ್ರತಾ ಕ್ರಮ ವಹಿಸಿರಲಿಲ್ಲ. ಆ ನಿಟ್ಟಿನಲ್ಲಿ 'ಡಿಸೆಂಬರ್ 6 ರಾಷ್ಟ್ರೀಯ ವಿಶ್ವಾಸ ದ್ರೋಹ ದಿನವಾಗಿದೆ' ಎಂದರು.

ಎಡಪಕ್ಷ ಮುಖಂಡರಾದ ಗುರುದಾಸ್ ಹಾಗೂ ಬಸುದೇವ್ ಆಚಾರ್ಯ ಅವರು ಲಿಬರ್ಹಾನ್ ಆಯೋಗದ ವರದಿ ಹಾಗೂ ಎಟಿಆರ್ ಕುರಿತು ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು, ಬಿಜೆಪಿ ಸಂಸದರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದರು.

ರಾಮನಿಗೆ 14ವರ್ಷವಾದ್ರೆ-ಲಿಬರ್ಹಾನ್‌ಗೆ 17ವರ್ಷ: ರಾಮರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮ 14ವರ್ಷಗಳ ಕಾಲ ವನವಾಸ ನಡೆಸಿದ ನಂತರವೂ ಮರಳಿ ರಾಜ್ಯಭಾರ ನಡೆಸಿದ್ದ ಎಂದು ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ತೀವ್ರ ಟೀಕಾಪ್ರಹಾರ ನಡೆಸಿದರು.

ಆದರೆ ಆಯೋಧ್ಯೆ ಘಟನೆ ಕುರಿತಂತೆ ತನಿಖೆ ನಡೆಸಲು ಲಿಬರ್ಹಾನ್ ಸುದೀರ್ಘ 17ವರ್ಷ ತೆಗೆದುಕೊಂಡಿರುವುದು ವಿಪರ್ಯಾಸ ಎಂದರು. ಆದರೆ 17ವರ್ಷದ ನಂತರವೂ ಕೂಡ ಲಿಬರ್ಹಾನ್ ಆಯೋಗ ಸತ್ಯವನ್ನು ಬಹಿರಂಗಪಡಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಅವೆಲ್ಲಕ್ಕಿಂತ ಮುಖ್ಯವಾಗಿ ಲಿಬರ್ಹಾನ್ ಆಯೋಗದಲ್ಲಿ ಎಲ್ಲೆಡೆ ಬಾಬರಿ ಮಸೀದಿ ಸ್ಥಳ ಎಂದೇ ಉಲ್ಲೇಖಿಸಿರುವುದಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಂಗ್,ಅದು ರಾಮಜನ್ಮಭೂಮಿಯಾಗಿದೆ ಎಂಬುದಕ್ಕೆ ಸಾಕಷ್ಟು ಆಧಾರವಿದೆ. ಅಷ್ಟಾದರೂ ಕೂಡ ಆಯೋಗ ಬಾಬರಿ ಮಸೀದಿ ಸ್ಥಳ ಎಂದೇ ಉಲ್ಲೇಖಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಸೀದಿ ಧ್ವಂಸದ ಬಗ್ಗೆ ಮಾತ್ರ ಮಾತನಾಡಿ-ಚಿದಂಬರಂ: ಲಿಬರ್ಹಾನ್ ಆಯೋಗದ ಬಿಸಿ,ಬಿಸಿ ಚರ್ಚೆ ನಡುವೆ ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿ ಮಾತನಾಡಿದ ಗೃಹ ಸಚಿವ ಪಿ.ಚಿದಂಬರಂ, ಮಸೀದಿಯನ್ನು ಧ್ವಂಸ ಮಾಡಿದವರು ಯಾರು ಎಂಬ ಬಗ್ಗೆ ಮಾತ್ರ ಮಾತನಾಡಿ ಅಷ್ಟೇ, ಅದು ಬಿಟ್ಟು ಬೇರೆ ವಿಷಯಗಳ ಚರ್ಚೆ ಅನಗತ್ಯ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ