ರಾಣ್ ಆಫ್ ಕಚ್(ಗುಜರಾತ್), ಸೋಮವಾರ, 7 ಡಿಸೆಂಬರ್ 2009( 18:03 IST )
ಔದ್ಯಮಿಕವಾಗಿ ಅಭಿವೃದ್ಧಿಗೊಂಡ ರಾಜ್ಯಗಳಲ್ಲಿ ಒಂದು ಎಂಬುದಾಗಿ ಗುಜರಾತನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪಣತೊಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸ್ವತಹ ತನ್ನ ಉಡುಗೆತೊಡುಗೆಯಲ್ಲೂ ಬದಲಾದಂತೆ ಇತ್ತೀಚೆಗೆ ಕಂಡುಬರುತ್ತಿದ್ದಾರೆ.
ಇತ್ತೀಚೆಗೆ ನಡೆದ ಮೂರು ದಿನಗಳ ಕಾಲದ ರನ್ನೋತ್ಸವದಲ್ಲಿ ಹಾಜರಿದ್ದ ಮೋದಿ, ತನ್ನ ಎಂದಿನ ಖಾದಿ ಕುರ್ತಾದ ಬದಲಿಗೆ ಫೇಡೆಡ್ ಡೇನಿಮ್ ಮತ್ತು ಪೋಲೋ ಪುಲ್ಓವರ್ ಧರಿಸಿ ಕಂಗೊಳಿಸುತ್ತಿದ್ದರು. ಕಡುನೀಲಿ ಬಣ್ಣದ ಡಿಸೈನರ್ ಡೇನಿಮ್ ಉಡುಗೆಗೆ ತಕ್ಕುದಾದ ಟ್ರೆಂಡಿ ಲೆದರ್ ಚಪ್ಪಲಿಯೂ ಕಾಲಲ್ಲಿತ್ತು.
ಅವರ ಪಾಶ್ಚಾತ್ಯ ಮಾದರಿಯ ಉಡುಗೆಗೆ ತಕ್ಕಂತೆಯೇ ಅವರ ದೇಹಭಾಷೆಯೂ ಕಂಡು ಬರುತ್ತಿತ್ತು. ಕಿಸೆಯೊಳಗೆ ಕೈ ಹಚ್ಚಿ ನಡೆಯುವ ಅವರನ್ನು ಕಂಡ ಹಿರಿಯ ಅಧಿಕಾರಿಯೊಬ್ಬರಿಂದ "ಬಾಲಿವುಡ್‌ನಿಂದ ನೇರ ಬಂದಂತಿದೆ" ಎಂಬ ಮೆಚ್ಚುಗೆ ವ್ಯಕ್ತವಾಯಿತು.
ನೀವು ಚೆನ್ನಾಗಿ ಕಾಣಿಸ್ತೀರಾ ಎಂಬುದಾಗಿ ಸುದ್ದಿಗಾರರು ಮೆಚ್ಚುಗೆ ಸೂಚಿಸಿದಾಗ, ಇಮೇಜ್ ಬದಲಾಗುತ್ತೆ ಎಂದು ನಕ್ಕ ಮುಖ್ಯಮಂತ್ರಿ ಮೋದಿ, "ಎಲ್ಲಾ ಸಮಯದಲ್ಲೂ ವಿದೇಶಿ ಗಣ್ಯರು ಮಾತುಕತೆಗೆ ಇರುತ್ತಾರೆ. ಗುಜರಾತ್ ಮುನ್ನಡೆ ಕಾಣುತ್ತಿರುವ ರಾಜ್ಯ" ಎಂದರು.
ಮೋದಿ ಅವರು ಇತ್ತೀಚೆಗೆ ಕೌಬಾಯ್ ಹ್ಯಾಟ್ ಹಾಕಿ ದೂರದರ್ಶನದಲ್ಲಿ ಕಂಡು ಬಂದಿದ್ದರು. ಇದಲ್ಲದೆ, ಟ್ರೆಂಚ್ ಕೋಟ್‌ಗಳು, ಪಾಶ್ಚಾತ್ಯ ಪ್ಯಾಂಟುಗಳು ಕೆಲವೊಮ್ಮೆ ಭಾರತೀಯ ಚೂಡಿದಾರ್ ಇವುಗಳೂ ಮೋದಿಯವರಿಗೆ ಅಚ್ಚುಮೆಚ್ಚು.